ಅದಾಗಲೇ ಅಯೋಧ್ಯೆ ರಾಮ ಮಂದಿರ ಹಾಗೂ ಕಾಶಿ ವಿಶ್ವನಾಥ ಧಾಮದ ವಿಚಾರದಲ್ಲಿ ದೊಡ್ಡ ಹೆಜ್ಜೆಗಳನ್ನೇ ಇಟ್ಟಿರುವ ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಗಳು ಇದೀಗ ಮಥುರಾದ ಬೃಂದಾವನ ಮಂದಿರದ ವಿಚಾರವಾಗಿ ಮಾತನಾಡಲು ಆರಂಭಿಸಿವೆ. ಅದರಲ್ಲೂ ಉತ್ತರ ಪ್ರದೇಶದ ಬಿಜೆಪಿ ನಾಯಕರು ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಾತನಾಡುತ್ತಿದ್ದಾರೆ.
ರಾಜ್ಯದ ಫರುಕಾಬಾದ್‌ನಲ್ಲಿ ತಮ್ಮ ಜನವಿಶ್ವಾಸ ಯಾತ್ರೆಯ ವೇಳೆ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಅಯೋಧ್ಯೆಯಲ್ಲಿ ರಾಮ ಮಂದಿರ ಹಾಗೂ ಕಾಶಿಯಲ್ಲಿ ವಿಶ್ವನಾಥ ಧಾಮದ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಮುನ್ನುಡಿ ಬರೆದಿದೆ. ಹೀಗಿರುವಾಗಿ ಮಥುರಾವನ್ನು ಹಾಗೇ ಬಿಡಲು ಸಾಧ್ಯವೇ?” ಎಂದಿದ್ದಾರೆ.
BIG NEWS: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಬಿ.ವೈ. ವಿಜಯೇಂದ್ರ ಸೇರಿ ಹೊಸ ಟೀಂ, ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್
ಇದೇ ವೇಳೆ ಮಾತು ಮುಂದುವರೆಸಿದ ಯೋಗಿ, “ನಾವು ಕೋವಿಡ್-19 ಲಸಿಕೆಗಳು ಹಾಗೂ ಪಡಿತರವನ್ನು ಎಲ್ಲರಿಗೂ ಉಚಿತವಾಗಿ ನೀಡುತ್ತಿದ್ದೇವೆ. ಉತ್ತಮ ಸರ್ಕಾರವಿದ್ದಾಗ ಹೀಗೇ ಆಗುತ್ತದೆ. ಎಸ್‌ಪಿ ಅಥವಾ ಬಿಎಸ್‌ಪಿ ಸರ್ಕಾರಗಳು ಇದ್ದಲ್ಲಿ, ಸಾರ್ವಜನಿಕರ ಹಿತಕ್ಕಾಗಿ ಇರುವ ದುಡ್ಡೆಲ್ಲ ಅವರವರ ವೈಯಕ್ತಿಕ ಖಾತೆಗಳನ್ನು ಸೇರುತ್ತಿದ್ದವು,” ಎಂದಿದ್ದಾರೆ.