![](https://kannadadunia.com/wp-content/uploads/2021/12/54898f12-8567-4307-9ff8-51c5388fb6e2-2.jpg)
ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ 84ನೇ ವರ್ಷಕ್ಕೆ ಕಾಲಿಟ್ಟರು.
ಅವರ ಹುಟ್ಟುಹಬ್ಬದ ಸರಳ ಆಚರಣೆ ಹೊಗಳಿಕೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದಿದೆ.
ಕಪ್‌ಕೇಕ್‌ನಲ್ಲಿ ಮೇಣದಬತ್ತಿ ಊದುತ್ತಿರುವುದನ್ನು ವೀಡಿಯೊ ವೈರಲ್ ಆಗಿದ್ದು, ಈ ವಿಡಿಯೋ ಕ್ಲಿಪ್ ಅನ್ನು ಟಾಟಾ ಮೋಟಾರ್ಸ್ ಫೈನಾನ್ಸ್ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ ವೈಭವ್ ಭೋರ್ ಪೋಸ್ಟ್ ಮಾಡಿದ್ದಾರೆ.
ಮೂರು ದಿನ ಮನೆಯಲ್ಲೇ ಇತ್ತು ಮೃತದೇಹ, ಕಾರಣ ಗೊತ್ತಾ…?
ಟಾಟಾ ಅವರ ಕಚೇರಿಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುವ ಶಂತನು ನಾಯ್ಡು ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಆಚರಣೆ ವೇಳೆ ನಾಯ್ಡು ಅವರು ಚಪ್ಪಾಳೆ ತಟ್ಟಿದರು ಮತ್ತು ತಮ್ಮ ಬಾಸ್‌ಗೆ ಬರ್ತ್‌ಡೇ ವಿಶ್ವಮಾಡುವ ಹಾಡನ್ನು ಹಾಡಿರುವುದು, ಕೇಕ್ ತಿನ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವೀಡಿಯೊವನ್ನು ಹಂಚಿಕೊಂಡ ವೈಭವ್ “ರಾಷ್ಟ್ರದ ಹೆಮ್ಮೆ ಮತ್ತು ಎಲ್ಲರಿಗೂ ಸ್ಫೂರ್ತಿ.” ಎಂದು ಶೀರ್ಷಿಕೆ ನೀಡಿದ್ದಾರೆ.
ಲಿಂಕ್ಡ್‌ಇನ್ ಬಳಕೆದಾರರು ವೈಭವ್ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಟಾಟಾಗೆ ಶುಭ ಹಾರೈಸಿದ್ದಾರೆ. “ಶಂತನು, ನೀವು ಒಬ್ಬ ಅದೃಷ್ಟವಂತ ವ್ಯಕ್ತಿ” ಎಂದು ಕೋಮಲ್ ಪಾಂಡೆ ಎಂಬುವರು ಬರೆದಿದ್ದಾರೆ.
“ಅತ್ಯಂತ ಸ್ಪೂರ್ತಿದಾಯಕ ಮತ್ತು ವಿನಮ್ರ ವ್ಯಕ್ತಿ” ಎಂದು ಇನ್ನೊಬ್ಬರು ಬಣ್ಣಿಸಿದ್ದಾರೆ. “ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ನೀಡಲಿ” ಎಂದು ಹಾರೈಸಿದ್ದಾರೆ.
ವಿವಿಧ ಪಕ್ಷದ ರಾಜಕೀಯ ನಾಯಕರು ಮತ್ತು ಉದ್ಯಮಿಗಳು ಟಾಟಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಟ್ವೀಟ್ ಮಾಡಿದ್ದಾರೆ.