alex Certify ಕೊರೊನಾ ಅಲರ್ಟ್: ಹಲವು ರಾಜ್ಯಗಳಲ್ಲಿ ದಿನದ ಪ್ರಕರಣಗಳಲ್ಲಿ ಭಾರಿ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಅಲರ್ಟ್: ಹಲವು ರಾಜ್ಯಗಳಲ್ಲಿ ದಿನದ ಪ್ರಕರಣಗಳಲ್ಲಿ ಭಾರಿ ಏರಿಕೆ

ಬುಧವಾರ ಬೆಳಿಗ್ಗೆ 8ಗಂಟೆಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 9,195 ಹೊಸ ಕೋವಿಡ್ -19 ಪ್ರಕರಣ ವರದಿಯಾಗಿದ್ದು, ಭಾರತದ ಸಕ್ರಿಯ ಪ್ರಕರಣ 77,002ಕ್ಕೆ ಏರಿದೆ.

ಅಚ್ಚರಿ ಎಂದರೆ ದಿನವೊಂದರಲ್ಲಿ ಹಲವು ರಾಜ್ಯಗಳಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ. ಮುಂಬೈನಲ್ಲಿ 2,510 ಹೊಸ ಪ್ರಕರಣ, ದೆಹಲಿಯಲ್ಲಿ 923, ಬೆಂಗಳೂರಿನಲ್ಲಿ 400, ಕೋಲ್ಕತ್ತಾದಲ್ಲಿ 540 ಮತ್ತು ಚೆನ್ನೈನಲ್ಲಿ 294 ಪ್ರಕರಣಗಳು ವರದಿಯಾಗಿವೆ.

ಭಾರತದಲ್ಲಿ ಓಮಿಕ್ರಾನ್‌ನ ಕಣ್ಗಾವಲಿಗಾಗಿ ಸೂಕ್ತ ಸಾರ್ವಜನಿಕ ಆರೋಗ್ಯ ಕ್ರಮ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಐಎನ್‌ಎಸ್‌ಎಸಿಒಜಿ ಹೇಳಿದೆ.

ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ

ಜಾಗತಿಕವಾಗಿ ಒಮಿಕ್ರಾನ್ ರೂಪಾಂತರದಿಂದ ರೋಗಲಕ್ಷಣದ ಸೋಂಕಿನಿಂದ ರಕ್ಷಿಸಲು ಲಸಿಕೆಗಳ ಸಾಮರ್ಥ್ಯ ಅಥವಾ ಮುಂಚಿನ ಸೋಂಕಿನ ಸಾಮರ್ಥ್ಯವು ಗಮನಾರ್ಹವಾಗಿ ಕಡಿಮೆಯಾಗಿದೆ.

“ಡೆಲ್ಟಾ ಜಾಗತಿಕವಾಗಿ ಹೆಚ್ಚು ಪ್ರಚಲಿತದಲ್ಲಿರುವ ವೇರಿಯಂಟ್ ಆಗಿ ಮುಂದುವರಿದರೆ, ಓಮಿಕ್ರಾನ್ ರೂಪಾಂತರವು ದಕ್ಷಿಣ ಆಫ್ರಿಕಾದಿಂದ ಹರಡಿ ಯುಕೆ ಮತ್ತು ಇತರೆಡೆಗಳಲ್ಲಿ ಪ್ರಬಲವಾದ ರೂಪಾಂತರವಾಗಲು ಹಾದಿಯಲ್ಲಿದೆ ಎಂದು ಐಎನ್‌ಎಸ್‌ಎಸಿಒಜಿ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...