
ನವದೆಹಲಿ: ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಾಲಿಸಿದಾರರಿಗೆ ಇರುವ ಕಾಯಿಲೆಗೆ ವೈದ್ಯಕೀಯ ವೆಚ್ಚ ಭರಿಸಲು ವಿಮೆ ಕಂಪನಿಗಳು ಮೆಡಿಕ್ಲೇಮ್ ನಿರಾಕರಿಸುವಂತಿಲ್ಲ ಎಂದು ಹೇಳಿದೆ.
ಅನಿರೀಕ್ಷಿತವಾಗಿ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಪರಿಹಾರದ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವ ಅಂಶ ಸರಿಯಲ್ಲ. ಆರೋಗ್ಯ ವಿಮೆ ನಿರಾಕರಣೆ ಸಲ್ಲದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆರೋಗ್ಯ ಅನಿರೀಕ್ಷಿತವಾಗಿ ಬರಬಹುದು. ಅನಿರೀಕ್ಷಿತ ಆರೋಗ್ಯಕ್ಕೆ ವಿಮೆ ಕ್ಲೇಮ್ ನಿರಾಕರಣೆ ಕುರಿತಂತೆ ಒಪ್ಪಂದದಲ್ಲಿ ಸ್ಪಷ್ಟನೆ ಇಲ್ಲದಿದ್ದರೆ, ಅದನ್ನು ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠ ಈ ಆದೇಶ ಹೊರಡಿಸಿದೆ. ವ್ಯಕ್ತಿಯೊಬ್ಬರು ಅಮೆರಿಕಕ್ಕೆ ತೆರಳುವ ಮೊದಲು ಓವರ್ಸೀಸ್ ಮೆಡಿಕ್ಲೇಮ್ ಬ್ಯುಸಿನೆಸ್ ಅಂಡ್ ಹಾಲಿಡೇ ಪಾಲಿಸಿ ಮಾಡಿಸಿದ್ದರು. ಅಮೆರಿಕಕ್ಕೆ ಬಂದ ಬಳಿಕ ಅವರು ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಚಿಕಿತ್ಸೆಯ ವೆಚ್ಚವನ್ನು ಭರಿಸಲು ಯುನಿಟೆಡ್ ಇನ್ಸೂರೆನ್ಸ್ ಕಂಪನಿ ಒಪ್ಪಿರಲಿಲ್ಲ. ಅವರ ಆರೋಗ್ಯ ಪರಿಸ್ಥಿತಿ ಕುರಿತಂತೆ ಮೊದಲೇ ತಿಳಿಸದ ಕಾರಣ ಮೆಡಿಕ್ಲೇಮ್ ತಿರಸ್ಕರಿಸಲಾಗಿತ್ತು.