
ಜಾರ್ಖಂಡ್ ರಾಜ್ಯದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 25 ರೂ. ಇಳಿಕೆ ಮಾಡಲಾಗುವುದು. ಜನವರಿ 26ರಿಂದ ಪೆಟ್ರೋಲ್ ಬೆಲೆಯನ್ನು 25 ರೂ. ಇಳಿಕೆ ಮಾಡುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಘೋಷಣೆ ಮಾಡಿದ್ದಾರೆ.
ಜಾರ್ಖಂಡ್‌ನಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ 25 ರೂಪಾಯಿಗಳ ಬೃಹತ್ ರಿಯಾಯಿತಿ ಘೋಷಣೆ ಮಾಡಲಾಗಿದೆ. ಆದರೆ ದ್ವಿಚಕ್ರ ವಾಹನಗಳಿಗೆ ಮಾತ್ರ ಇದು ಅನ್ವಯವಾಗಲಿದೆ.
ದ್ವಿಚಕ್ರವಾಹನ ಮತ್ತು ಸ್ಕೂಟರ್ ಓಡಿಸುವವರಿಗೆ ರಾಜ್ಯ ಸರ್ಕಾರ ಈ ಇಂಧನ ರಿಯಾಯಿತಿ ನೀಡಲಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬುಧವಾರ ಈ ಘೋಷಣೆ ಮಾಡಿದ್ದಾರೆ.
2022ರ ಜನವರಿ 26 ರಿಂದ ಈ ರಿಯಾಯಿತಿ ಲಭ್ಯವಾಗಲಿದೆ ಎಂದು ಸೊರೆನ್ ಹೇಳಿದ್ದಾರೆ. ಸರ್ಕಾರದಲ್ಲಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.