ನೆನ್ನೆಯಿಂದ ಪಿಎಂ ಅವರ ಹೊಸ ಮರ್ಸಿಡಿಸ್ ಮೇಬ್ಯಾಕ್‌ನ ಬೆಲೆ ಮತ್ತು ಇತರ ವಿವರಗಳ ಕುರಿತಾದ ಸುದ್ದಿಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಮೊದಲು ಅವರು ಬಳಸುತ್ತಿದ್ದುದು BMW ಕಾರ್, ಆದರೆ BMW ಆ ಮಾಡೆಲ್ ಅನ್ನು ತಯಾರಿಸುವುದನ್ನು ನಿಲ್ಲಿಸಿರುವುದರಿಂದ ಹೊಸ ಕಾರುಗಳನ್ನ ಕೊಂಡುಕೊಳ್ಳಲಾಗಿದೆ. ಆದರೆ ಈ ಹೊಸ ಕಾರುಗಳನ್ನ ಕೊಂಡು ಯಾವುದೇ, ನವೀಕರಣ ಮಾಡಿಲ್ಲ.
ಜೊತೆಗೆ ಕಾರಿನ ಬೆಲೆ ತುಂಬಾ ಕಡಿಮೆಯಾಗಿದೆ. ವಾಸ್ತವವಾಗಿ ಇದು ಮಾಧ್ಯಮದಲ್ಲಿ ಉಲ್ಲೇಖಿಸಲಾದ ಬೆಲೆಯ ಕಾಲುಭಾಗದಷ್ಟು ಇಲ್ಲ, ಎಂದು ಸರ್ಕಾರಿ ಉನ್ನತ ಮೂಲಗಳಿಂದ ವರದಿಯಾಗಿದೆ.
SPG (ಸ್ಪೆಷಲ್ ಪ್ರೊಟೆಕ್ಷನ್ ಗಾರ್ಡ್ಸ್) ಮೂಲಗಳ ಪ್ರಕಾರ, ಪ್ರತಿ ಆರು ವರ್ಷಕ್ಕೊಮ್ಮೆ ಪ್ರಧಾನ ಮಂತ್ರಿಯವರ ರಕ್ಷಣೆಗಾಗಿ ಕಾರುಗಳನ್ನ ಬದಲಾಯಿಸಲಾಗತ್ತೆ. ಆದರೆ ಪ್ರಸ್ತುತ ಇದ್ದ ಕಾರುಗಳನ್ನ ಕಳೆದ ಎಂಟು ವರ್ಷಗಳಿಂದ ಬಳಸಲಾಗುತ್ತಿತ್ತು, ಹಾಗಾಗಿ ಅವುಗಳ ಬದಲು ಹೊಸ ಕಾರುಗಳನ್ನ ಖರೀದಿಸಲಾಗಿದೆ. ಈ ನಿರ್ಧಾರ ಪ್ರಧಾನಿಯವರ ರಕ್ಷಣೆಗಾಗಿ SPG ಮಾಡುತ್ತದೆ ಹೊರತು, ಪಿಎಂ ಅವರು ಈ ಬಗ್ಗೆ ನಿರ್ಧರಿಸುವುದಿಲ್ಲ.
ಮಾಧ್ಯಮಗಳಲ್ಲಾಗುತ್ತಿರುವ ಪಿಎಂ ಭದ್ರತಾದಳದ ಅಥವಾ ಅವರು ಬಳಸುವ ವಾಹನದ ವಿಚಾರ ಅನಾವಶ್ಯಕ. ಇದರಿಂದ ಪ್ರಯೋಜನವೇನು ಇಲ್ಲ ಆದರೆ, ಮಾಧ್ಯಮದಲ್ಲಿ ಅವರ ಭದ್ರತೆಯ ವಿಚಾರ ಹೆಚ್ಚು ಚರ್ಚೆಯಾದಷ್ಟು ಅವರ ಭದ್ರತೆಗೆ ಕುತ್ತು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.