ಮಂಗಳೂರಿನ ವಿವಿಧೆಡೆಗಳಲ್ಲಿ ದೈವಸ್ಥಾನಗಳಲ್ಲಿ ಅಪಚಾರ ಎಸಗಿದ್ದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಉಣ್ಕಲ್ ಮೂಲದ ದೇವದಾಸ್ ದೇಸಾಯಿ(62) ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ 20 ವರ್ಷಗಳಿಂದ ಕೋಟೆಕಾರ್ನಲ್ಲಿ ನೆಲೆಸಿದ್ದ ಎನ್ನಲಾಗಿದೆ.
ಒಬ್ಬಂಟಿಯಾಗಿ ವಾಸಿಸುತ್ತಿದ್ದ ಈತ ಕ್ರಿಶ್ಚಿಯನ್ ಧರ್ಮದ ಅನುಯಾಯಿಯಾಗಿದ್ದ ಎನ್ನಲಾಗಿದೆ. ಭೂಮಿಯು ಅಂತ್ಯಕ್ಕೆ ಬಂದಿದೆ ಎಂಬ ಮನಃಸ್ಥಿತಿ ಹೊಂದಿದ್ದ ಈತ ಕಾಂಡೋಮ್ಗಳನ್ನು ಹಾಕಿ ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುತ್ತಿದ್ದ ಎನ್ನಲಾಗಿದೆ. ದೇವಸ್ಥಾನ, ಮಸೀದಿ ಹಾಗೂ ಗುರುದ್ವಾರ ಸೇರಿದಂತೆ ಒಟ್ಟು 18 ಧಾರ್ಮಿಕ ಕೇಂದ್ರಗಳಲ್ಲಿ ಈತ ಅಪಚಾರ ಎಸಗಿದ್ದ.
ಚರಂಡಿಗಳಿಂದ ಆಯ್ದುಕೊಂಡ ಕಾಂಡೋಮ್ಗಳನ್ನು ಹಾಕಿ ಏಸು ಕ್ರಿಸ್ತನಿಗೆ ಸಂಬಂಧಿತ ಬರಹ ಹಾಕುತ್ತಿದ್ದ. ಏಸುವೊಬ್ಬನೇ ದೇವನೆಂದು ನಂಬಿದ್ದ ಈತ ಬಂಗ್ರ ಕುಳೂರು ಗುರುದ್ವಾರ, ಉಳ್ಳಾಲ ದರ್ಗಾ ಕಾಣಿಕೆ ಡಬ್ಬಿ, ಎಜೆ ಶೆಟ್ಟಿ ಬಳಿ ಇರುವ ದರ್ಗಾದಲ್ಲಿಯೂ ಅಪಚಾರ ಎಸಗಿದ್ದ ಎನ್ನಲಾಗಿದೆ. ಈತನನ್ನು ಬಂಧಿಸಿರುವ ಪೊಲೀಸರು ಆರೋಪಿಯ ಮಾನಸಿಕ ಪರೀಕ್ಷೆಗೆ ಮುಂದಾಗಿದ್ದಾರೆ.