ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ನಿವಾಸಿ ಬೋನಿಗಿ ಆನಂದಯ್ಯ ಎನ್ನುವ ವ್ಯಕ್ತಿ, ಒಮಿಕ್ರಾನ್ ರೂಪಾಂತರ ತಡೆಗಟ್ಟುವ ಔಷಧಿಯನ್ನ ವಿತರಿಸುತ್ತಿದ್ದಾರೆ. ಈ ಔಷಧಿಯನ್ನ ಖರೀದಿಸಲು ಅಕ್ಕಪಕ್ಕದ ಗ್ರಾಮಗಳು ಮತ್ತು ಪಟ್ಟಣಗಳ ನಿವಾಸಿಗಳು ಕೃಷ್ಣಪಟ್ಟಣಕ್ಕೆ ಆಗಮಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಆನಂದಯ್ಯ ಅವರ ಮನೆ ಮುಂದೆ ‘ಓಮಿಕ್ರಾನ್ ಡ್ರಗ್’ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.
ಒಮಿಕ್ರಾನ್ ತಡೆಗಟ್ಟುವ ಔಷಧಿ ಬಗ್ಗೆ ಆನಂದಯ್ಯನನ್ನ ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳಿಂದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇವರು ಔಷಧಿಯನ್ನ ನೀಡುತ್ತಿರುವುದರಿಂದ ನಮ್ಮ ಗ್ರಾಮಕ್ಕೆ ಇತರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಸೋಂಕು ಹರಡಬಹುದು ಎಂದು ಆತಂಕ ಗ್ರಾಮಸ್ಥರು ಆತಂಕ ಹೊರಹಾಕಿದ್ದಾರೆ.
ಬಾಲ್ಕನಿಯಲ್ಲಿ ಬಟ್ಟೆ ಒಣಹಾಕಿದ್ರೆ ಹುಷಾರ್…! ಸಿಗರೇಟು ಸೇದಿದ್ರೂ ಬೀಳುತ್ತೆ ದಂಡ
ಈ ಹಿಂದೆ, ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಸ್ಥಳೀಯ ಶಾಸಕ ಜಿ. ಗೋವರ್ಧನ ರೆಡ್ಡಿ ಅವರ ಸಹಾಯದಿಂದ ಆನಂದಯ್ಯ ಅವರು ಇದೇ ರೀತಿಯ ಗಿಡಮೂಲಿಕೆ ಔಷಧಿಯನ್ನು ಮಾರಾಟ ಮಾಡಿದ್ದರು. ಜೂನ್ನಲ್ಲಿ, ಆಯುಷ್ ಸಚಿವಾಲಯದ ತಂಡವು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯವರಿಗೆ, ಈ ಔಷಧಿಯನ್ನ ವಿಶ್ಲೇಷಿಸಿ ಆನಂತರ ಉಪಯೋಗಿಸಿ ಎಂದು ಕರೆ ನೀಡಿತ್ತು.
ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್ (ಸಿಸಿಆರ್ಎಎಸ್)ನಲ್ಲಿ ಈ ಔಷಧಿಯನ್ನ ಪರೀಕ್ಷಿಸಿದ ನಂತರ, ಆಂಧ್ರ ಸರ್ಕಾರ, ಆನಂದಯ್ಯ ಅವರು ಕೋವಿಡ್-19 ರೋಗಿಗಳಿಗೆ ನೀಡುತ್ತಿರುವ ಗಿಡಮೂಲಿಕೆ ಔಷಧಿಯನ್ನು ಬಳಸಲು ಅನುಮತಿ ನೀಡಿತ್ತು. ಈಗ ಗ್ರಾಮಸ್ಥರು ಧ್ವನಿ ಎತ್ತಿರುವುದರಿಂದ ಒಮಿಕ್ರಾನ್ ಔಷಧಿಯನ್ನ ಪರೀಕ್ಷೆಗೆ ಒಳಪಡಿಸುತ್ತಾರಾ ಅಥವಾ ತಡೆಯುತ್ತಾರಾ ಕಾದು ನೋಡಬೇಕು.