ವಯನಾಡ್: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೃದ್ಧನನ್ನು ಬಾಲಕಿಯರಿಬ್ಬರು ಕೊಲೆ ಮಾಡಿ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ವಯನಾಡ್ ಜಿಲ್ಲೆಯ ಆಯಿರಮ್ ಕೊಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ 70 ವರ್ಷದ ಮೃತವ್ಯಕ್ತಿಗೆ ಇಬ್ಬರು ಪತ್ನಿಯರು ಮಕ್ಕಳಿದ್ದಾರೆ. ತನ್ನ ದೂರದ ಸಂಬಂಧಿಯಾಗಿರುವ ಮಹಿಳೆ ಮೇಲೆ ಮಂಗಳವಾರ ಬೆಳಗ್ಗೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಈ ವೇಳೆ ತಡೆಯಲು ಮುಂದಾದ 16 ಮತ್ತು 15 ವರ್ಷದ ಬಾಲಕಿಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹವನ್ನು ಬಾವಿಗೆ ಎಸೆದ ಬಾಲಕಿಯರು ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.