ಡಿಸೆಂಬರ್ 31ಕ್ಕೆ ಜರ್ಸಿ ಚಿತ್ರ ಬಿಡುಗಡೆಯಾಗತ್ತೆ ಎಂದು ಕಾದು ಕುಳಿತಿದ್ದ ಶಾಹಿದ್ ಅಭಿಮಾನಿಗಳಿಗೆ ಚಿತ್ರ ತಂಡ ಶಾಕ್ ನೀಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳ ಕಾರಣ, ಜರ್ಸಿ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಚಿತ್ರದ ನಿರ್ಮಾಪಕರು ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳೊಂದಿಗೆ, ಕೆಲವು ರಾಜ್ಯಗಳು ಈಗಾಗಲೇ ಸಾರ್ವಜನಿಕ ಸಭೆ, ಥಿಯೇಟರ್‌ಗಳು, ಸ್ಪಾಗಳು, ಜಿಮ್‌ಗಳು ಇತ್ಯಾದಿಗಳನ್ನು ಮುಚ್ಚಲು ಪ್ರಾರಂಭಿಸಿವೆ. ಇದೇ ಕಾರಣದಿಂದಾಗಿ, ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅಭಿನಯದ ಜರ್ಸಿಯ ನಿರ್ಮಾಪಕರು, ಚಿತ್ರದ ಥಿಯೇಟರ್ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿಂದು 356 ಜನರಿಗೆ ಸೋಂಕು ದೃಢ, ಇಲ್ಲಿದೆ ಎಲ್ಲಾ ಜಿಲ್ಲೆಗಳ ವಿವರ
ಪ್ರಸ್ತುತ ಪರಿಸ್ಥಿತಿಗಳು ಮತ್ತು ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಜರ್ಸಿ ಚಲನಚಿತ್ರದ ಥಿಯೇಟರ್ ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ. ಇದುವರೆಗೆ ನೀವೆಲ್ಲಾ ನಮ್ಮ ತಂಡಕ್ಕೆ ಅಪಾರ ಪ್ರೀತಿ ನೀಡಿದ್ದೀರಾ, ಎಲ್ಲದಕ್ಕೂ ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ. ಎಲ್ಲರೂ ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ, ಮತ್ತು ಮುಂಬರುವ ಹೊಸ ವರ್ಷಕ್ಕೆ ನಿಮಗೆ ಶುಭ ಹಾರೈಸುತ್ತೇವೆ, ಎಂದು ಜರ್ಸಿ ಟೀಮ್ ಅಭಿಮಾನಿಗಳಿಗೆ ಪತ್ರ ಬರೆದಿದೆ. ಕಳೆದ ಹಲವು ದಿನಗಳಿಂದ ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಜೆರ್ಸಿಯ ಪ್ರಚಾರದಲ್ಲಿ ನಿರತರಾಗಿದ್ದರು, ಅಂದುಕೊಂಡಂತೆ ಆಗಿದ್ದರೆ ವರ್ಷದ ಕೊನೆಯ ದಿನ ಜರ್ಸಿ ದರ್ಶನವಾಗ್ತಿತ್ತು.
ದಿನಾಂಕ ಮುಂದೂಡಿಕೆಯಾಗ್ತಿದ್ದಂತೆ ಜರ್ಸಿ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಬಹುದು ಎಂಬ ಚರ್ಚೆಗಳು ಶುರುವಾದವು. ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ಚಲನಚಿತ್ರ, ವಿಮರ್ಶಕ ತರಣ್ ಆದರ್ಶ್, ಡಿ. 31 ರಂದು ಬಿಡುಗಡೆಯಾಗುವುದಿಲ್ಲ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು, ಜರ್ಸಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತೆ ಅನ್ನೋದು ಸುಳ್ಳು ಸುದ್ದಿ ಎಂದು ದೃಢಪಡಿಸಿದ್ದಾರೆ.