
ಹೊಸ ವರ್ಷವನ್ನ ಭರ್ಜರಿಯಾಗಿ ಆಚರಿಸಲು ಪ್ಲ್ಯಾನ್ ಹಾಕಿಕೊಂಡಿದ್ದ ಮಂದಿ ಸರ್ಕಾರದ ಕಠಿಣ ನಿಯಮಗಳಿಂದ ಶಾಕ್ ಗೆ ಒಳಗಾಗಿದ್ದಾರೆ.
ಬೆಂಗಳೂರಲ್ಲಂತು ಸೆಲೆಬ್ರೇಷನ್ ಸಾಧ್ಯವಿಲ್ಲ, ಆದ್ರೂ ಹೊಸ ವರ್ಷ ಆಚರಿಸಲೇಬೇಕಲ್ವಾ ಎಂದು ಬೇರೆ ಮಾರ್ಗ ಹುಡುಕ್ತಿದ್ದಾರೆ. ರಾಜ್ಯ ಬಿಟ್ಟು ಹೊರ ರಾಜ್ಯಗಳತ್ತ ಪ್ರಯಾಣಿಸಲು ಜನರು ಸಜ್ಜಾಗುತ್ತಿದ್ದಾರೆ. ಅದ್ರಲ್ಲು ಬೀಚ್ ಇರುವ ಪ್ರವಾಸಿ ತಾಣಗಳಿಗೆ ಹೆಚ್ಚಾಗಿ ಬಸ್ ಗಳು ಬುಕ್ ಆಗ್ತಿವೆ.
ಖಾಸಗಿ ಬಸ್ ಏಜೆಂಟ್ ಪ್ರಕಾರ, ಗೋವಾ, ಗೋಕರ್ಣ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಬುಕ್ ಆಗ್ತಿವೆ. ಸಾಮಾನ್ಯವಾಗಿ ಗೋವಾಗೆ ನಿತ್ಯ 5 -10 ಬಸ್ ಗಳು ಹೋಗ್ತಾಯಿವೆ, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಟ್ರಿಪ್ ಗಳು ಬುಕ್ ಆಗ್ತಿರೋದದ್ರಿಂದ ವರ್ಷದ ಕೊನೆ ದಿನಗಳಲ್ಲಿ 25- 30 ಬಸ್ ಗಳು ಹೋಗಲು ತಯಾರಿ ನಡೆಸಲಾಗ್ತಿದೆ. ಇತ್ತ ಗೋಕರ್ಣಾಗೆ ನಿತ್ಯ 5-6 ಬಸ್ ಗಳು ಬುಕ್ ಆಗ್ತಾಯಿದ್ದವು ಆದರೆ ಈಗ 12-15 ಬಸ್ ಗಳ ಅವಶ್ಯಕತೆ ಇದೆ ಎಂಬ ಮಾಹಿತಿ ಇದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪೋಸ್ಟರ್ ಹರಿದವನಿಗೆ ಗೂಸಾ
ಟ್ರಿಪ್ ಗಳ ಬೇಡಿಕೆ ಹೆಚ್ಚಾಗ್ತಿದ್ದಂತೆ ಖಾಸಗಿ ಬಸ್ ಗಳ ಟಿಕೆಟ್ ದರದಲ್ಲು ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ, ಗೋವಾ ಟಿಕೆಟ್ ದರ 1000-1200 ರೂಪಾಯಿ ಇದೆ. ಆದರೆ ಈಗ ಈ ದರ 2000-2200 ರೂಪಾಯಿಯಷ್ಟು ಹೆಚ್ಚಾಗಿದೆ. ಗೋಕರ್ಣದ ಸಾಮಾನ್ಯ ಟಿಕೆಟ್ ದರ – 800-900 ರೂಪಾಯಿ ಇದೆ, ಸಧ್ಯದ ಟಿಕೆಟ್ ದರ 1500-1700ಕ್ಕೆ ಜಿಗಿದಿದೆ. ಟಿಕೆಟ್ ದರ ಹೆಚ್ಚಾದ್ರೂ ನ್ಯೂ ಇಯರ್ ಸೆಲೆಬ್ರೇಷನ್ ಗೆ ತುದಿಗಾಲಲ್ಲಿ ನಿಂತಿರುವ ಜನರು ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಇನ್ನು ಡಿಸೆಂಬರ್ 30-31 ಕ್ಕೆ ಖಾಸಗಿ ಬಸ್ ಟಿಕೆಟ್ ದರ ಮತ್ತಷ್ಟು ಹೆಚ್ಚಾಗೊ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.