ಜನರು ಸಾಮಾನ್ಯವಾಗಿ ತಮ್ಮ ವೃದ್ಧಾಪ್ಯದಲ್ಲಿ ಸಾಹಸ ಕ್ರೀಡೆಗಳು ಮತ್ತು ಮೋಜಿನ ಚಟುವಟಿಕೆಗಳನ್ನು ಪ್ರಯತ್ನಿಸುತ್ತಾರೆ. ಏಕೆಂದರೆ ಅದು ಅವರ ಸಂಪೂರ್ಣ ಜೀವನಕ್ಕಾಗಿ ಅವರು ಶ್ರಮಿಸಿದ ತೃಪ್ತಿಯ ಭಾವನೆಯನ್ನು ನೀಡುತ್ತದೆ. ಇನ್ನೂ ಕೆಲವರು ತಮ್ಮ ಹಿರಿಯ ವಯಸ್ಸಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸುವವರೂ ಇದ್ದಾರೆ.
ಹೌದು, ವಯಸ್ಸು ಕೇವಲ ಸಂಖ್ಯೆಯಷ್ಟೇ…. ಸಾಧಿಸಲು ವಯಸ್ಸು ಅಡ್ಡಿ ಬರೋದಿಲ್ಲ ಅಂತಾ ಅದೆಷ್ಟೋ ಹಿರಿಯರು ಸಾಧಿಸಿ ತೋರಿಸಿದ್ದಾರೆ. ಕೇರಳದ 72 ವರ್ಷದ ಮಹಿಳೆ ಕೂಡ ಯುವಕರಂತೆ ರೋಪ್ ಮೇಲೇರಿ ಹೋಗಿ, ಸಂಭ್ರಮಿಸಿದ್ದಾರೆ.
ಕೇರಳದ ಪಾಲಕ್ಕಾಡ್‌ನ ಉದ್ಯಾನವನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರೋಪ್ ಮೇಲೆ ತಾನು ಕೂರಬೇಕು ಎಂದ ಮಹಿಳೆ, ಯಾವುದೇ ಅಳುಕಿಲ್ಲದೆ ಹೋಗಿ ಸವಾರಿ ಮಾಡಿದ್ದಾರೆ. ಸುರಕ್ಷತಾ ಸಾಧನಗಳನ್ನು ಬಳಸಿ ರೋಪ್ ಮೇಲೇರಿ ಹೋದಾಗ, ಆಕೆ ಸಾಂಪ್ರದಾಯಿಕ ಕೇರಳದ ಸೀರೆಯನ್ನು ಧರಿಸಿದ್ದರು. ಸವಾರಿಯ ನಂತರ ಬಹಳ ಸಂತೋಷಪಟ್ಟು ಅವರು ತನಗೆ ಯಾವುದೇ ಭಯವಿರಲಿಲ್ಲ, ಸವಾರಿ ಮಜವಾಗಿತ್ತು ಎಂದು ಹೇಳಿದ್ದಾರೆ.
ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನ ಯಾತ್ರಾ ಪ್ರೇಮಿಕಲ್ ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮಹಿಳೆಯನ್ನು ಪಾರು ಅಮ್ಮ ಎಂದು ಗುರುತಿಸಲಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, 48,000ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ನೆಟ್ಟಿಗರು ಕೂಡ ಇಷ್ಟಪಟ್ಟಿದ್ದಾರೆ.
https://www.youtube.com/watch?v=ePiCkkyKPgQ