alex Certify ಎರಡನೆ ಮಗುವಿಗೆ ತಂದೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೆ ಮಗುವಿಗೆ ತಂದೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಹಾಗೂ ಸಫಾ ದಂಪತಿ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ತಮ್ಮ ಗಂಡು ಮಗು ಜನಿಸಿರುವ ಬಗ್ಗೆ ಇರ್ಫಾನ್​ ಪಠಾಣ್​​ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಮಗುವಿಗೆ ದಂಪತಿ ಸುಲೈಮಾನ್​ ಖಾನ್​ ಎಂದು ನಾಮಕರಣ ಮಾಡಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಈ ಗುಡ್​ ನ್ಯೂಸ್​ ಶೇರ್​ ಮಾಡಿರುವ ಇರ್ಫಾನ್​ ಪಠಾಣ್​, ಸಫಾ ಹಾಗೂ ನಾನು ಗಂಡು ಮಗು ಸುಲೈಮಾನ್​ ಖಾನ್​ನ್ನು ಬರಮಾಡಿಕೊಂಡಿದ್ದೇವೆ. ತಾಯಿ ಹಾಗೂ ಮಗುವಿನ ಆರೋಗ್ಯ ಕ್ಷೇಮವಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ದಂಪತಿಗಳಿಗೆ ಇಮ್ರಾನ್​ ಹೆಸರಿನ ಪುತ್ರ ಕೂಡ ಇದ್ದಾನೆ. ಇರ್ಫಾನ್​ ಖಾನ್​ ಈ ಶುಭಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಕಮೆಂಟ್​ ಸೆಕ್ಷನ್​ನಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...