ರಾಜ್ಯ ರೈಲ್ವೇ ಪೊಲೀಸರ ಕಾರ್ಯಾಚರಣೆಯ ವಾರ್ಷಿಕ ಅಂಕಿಅಂಶ ಹೊರಬಿದ್ದಿದೆ. ಇಡೀ ವರ್ಷದ ಕಾರ್ಯಾಚರಣೆ ಬಗ್ಗೆ ರೈಲ್ವೇ ಇಲಾಖೆ ಮಾಹಿತಿ ನೀಡಿದೆ. ಈ ವರ್ಷದ ರೈಲ್ವೇ ಪೊಲೀಸರ ಕಾರ್ಯಾಚರಣೆಯಲ್ಲಿ, ವಿವಿಧ ಅಪರಾಧ ಪ್ರಕರಣಗಳಲ್ಲಿ ಸಾವಿರಾರು ಆರೋಪಿಗಳನ್ನ ಬಂಧಿಸಲಾಗಿದೆ. ಜೊತೆಗೆ ಡಿಸೆಂಬರ್ ವರೆಗೂ ಒಟ್ಟು 1.5 ಕೋಟಿ ಮೌಲ್ಯದ ಕಳುವು ಮಾಲು ಜಪ್ತಿ ಮಾಡಲಾಗಿದೆ.
ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳಿಂದಲೇ ವಿರೋಧ
ಈ ಕಳುವಾದ ಮಾಲುಗಳನ್ನ ಹಂತ ಹಂತವಾಗಿ ಮಾಲೀಕರಿಗೆ ಹಸ್ತಾಂತರ ಮಾಡಲಾಗ್ತಿದ್ದು, ಕೆಲ ತಿಂಗಳ ಹಿಂದೆ ಮೊದಲ ಹಂತದಲ್ಲಿ 73.19 ಲಕ್ಷ ಮೌಲ್ಯದ ಮಾಲುಗಳನ್ನ ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ.
ಇನ್ನುಳಿದಂತೆ ಇತ್ತೀಚಿನ ತಿಂಗಳುಗಳಲ್ಲಿ ಬರೋಬ್ಬರಿ 45.55 ಲಕ್ಷ ಮೌಲ್ಯದ ವಿವಿಧ ಕಳುವು ಮಾಲುಗಳನ್ನ ವಶಕ್ಕೆ ಪಡೆಯಲಾಗಿದೆ. 910.8 ಗ್ರಾಂ ಚಿನ್ನ, 25.03 ಗ್ರಾಂ ಬೆಳ್ಳಿ, 89 ಮೊಬೈಲ್ಸ್, 6 ದ್ವಿಚಕ್ರ ವಾಹನ, 137 ಕೆ.ಜಿ ರೈಲ್ವೇ ಎಲೆಕ್ಟ್ರಿಕಲ್ ವೈರ್ ಜಪ್ತಿ ಮಾಡಲಾಗಿದೆ. ಈ ಕಳುವಾದ ವಸ್ತುಗಳನ್ನ ಸಂಬಂಧಿಸಿದವರಿಗೆ ಹಸ್ತಾಂತರಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ರೈಲ್ವೆ SP ಸಿರಿಗೌರಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.