ಬೆಂಗಳೂರು: ಹೆಚ್ಚುತ್ತಿರುವ ಒಮಿಕ್ರಾನ್ ಕಟ್ಟಿಹಾಕುವ ನಿಟ್ಟಿನಲ್ಲಿ ಇಂದಿನಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ.
ನೈಟ್ ಕರ್ಫ್ಯೂ ಇಫೆಕ್ಟ್ ಥಿಯೇಟರ್ ಗಳಿಗೂ ತಟ್ಟಿದ್ದು, ಇಂದಿನಿಂದ ಚಿತ್ರಮಂದಿರಗಳಲ್ಲಿ 4 ಶೋ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆಯ ಶೋ ಲಾಸ್ಟ್ ಆಗಲಿದೆ.
BIG BREAKIG: 24 ಗಂಟೆಯಲ್ಲಿ ಮತ್ತೆ 6,358 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 6,450 ಜನರು ಡಿಸ್ಚಾರ್ಜ್
ನೈಟ್ ಕರ್ಫ್ಯೂ ಜಾರಿ ಇಂದಾಗಿ ನೈಟ್ ಶೋ ಸ್ಥಗಿತಗೊಂಡಿರುವುದರಿಂದ ಶೇ.30ರಷ್ಟು ಆದಾಯಕ್ಕೆ ಕತ್ತರಿ ಬಿದ್ದಿದೆ. ರಾಜ್ಯಾದ್ಯಂತ 630 ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಿವೆ. ಬೆಂಗಳೂರಿನಲ್ಲಿ ಮಲ್ಟಿಫ್ಲೆಕ್ಸ್ 45, ಸಿಂಗಲ್ ಸ್ಕ್ರೀನ್ 150 ಥಿಯೇಟರ್ ಗಳಿದ್ದು, 4 ಶೋಗಳಿಗೆ ಮಾತ್ರ ಅವಕಾಶವಿರುವುದು ಚಿತ್ರಮಂದಿರಗಳಿಗೆ ಕರ್ಫ್ಯೂ ಹೊಡೆತ ಬೀಳಲಿದೆ.