ಮೇಷ : ನೀವು ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಲೇಬೇಕು. ಇಲ್ಲವಾದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿ ಬರಲಿದೆ. ವ್ಯಾಪಾರ – ವ್ಯವಹಾರಗಳನ್ನು ವಿಸ್ತರಿಸುವ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸಲಿದ್ದೀರಿ. ಮನೆಯಲ್ಲಿ ಇಂದು ಚಿನ್ನಾಭರಣ ಖರೀದಿಸುವ ಸಾಧ್ಯತೆ ಇದೆ .
ವೃಷಭ : ಸ್ನೇಹಿತರು ನಿಮ್ಮ ಉದ್ಯೋಗಕ್ಕೆ ಲಾಭ ಉಂಟಾಗಬಲ್ಲ ಕಾರ್ಯವನ್ನು ಮಾಡಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ನಿರಂತರ ಪ್ರವಾಸದಲ್ಲಿರುವ ನೀವು ಅತಿಯಾಗಿ ದಣಿಯಲಿದ್ದೀರಿ. ಬೆನ್ನು ನೋವಿನ ಸಮಸ್ಯೆಯಂತೂ ನಿಮ್ಮನ್ನು ಬೆಂಬಿಡದೇ ಕಾಡಲಿದೆ. ಶಿವನನ್ನು ಆರಾಧಿಸಿ.
ಮಿಥುನ : ನೀವು ಅಂದುಕೊಂಡ ಯಶಸ್ಸು ನಿಮ್ಮದಾಗಲಿದೆ. ಅನೇಕ ದಿನಗಳಿಂದ ಉದ್ಯೋಗಕ್ಕಾಗಿ ಅರಸುತ್ತಿದ್ದ ನಿಮಗೆ ಇಂದು ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗ ಸಿಗಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.
ಕಟಕ : ವೃತ್ತಿ ಕ್ಷೇತ್ರದಲ್ಲಿ ನೀವಿಂದು ಅನೇಕ ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಇದು ನಿಮ್ಮ ಇಡೀ ದಿನ ನೆಮ್ಮದಿಯನ್ನು ಕಿತ್ತುಕೊಳ್ಳಬಹುದು . ವಿದ್ಯಾರ್ಥಿಗಳು ತಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು. ಪೋಷಕರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ಉದ್ಯಮ ಕ್ಷೇತ್ರದಲ್ಲಿ ಗೆಲುವಿದೆ.
ಸಿಂಹ : ಮೇಲಾಧಿಕಾರಗಳ ವಿಶ್ವಾಸವನ್ನು ಗಳಿಸಲು ಅನೇಕ ಕಾರ್ಯಗಳನ್ನು ಮಾಡಲಿದ್ದೀರಿ. ನಿಮಗೆ ಸಂಗಾತಿಯು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ಕನ್ಯಾ : ಎಲ್ಲಾ ಪರಿಸ್ಥಿತಿಯಲ್ಲೂ ಮಾತಿನ ಮೇಲೆ ಸಂಯಮ ಇರಲಿ. ದ್ವಿದಳ ಧಾನ್ಯಗಳನ್ನು ದಾನ ಮಾಡಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿದೆ.
ತುಲಾ : ವೈವಾಹಿಕ ಜೀವನದಲ್ಲಿ ಇದ್ದ ಎಲ್ಲ ಭಿನ್ನಾಭಿಪ್ರಾಯಗಳು ದೂರಾಗಲಿವೆ. ಸಂಗಾತಿ ಜೊತೆ ಸೇರಿ ಭವಿಷ್ಯದ ಯೋಜನೆಗಳನ್ನು ರೂಪಿಸಲಿದ್ದೀರಿ. ಸಂತಾನ ಭಾಗ್ಯವಿದೆ.
ವೃಶ್ಚಿಕ : ಬಾಕಿ ಬರಬೇಕಿದ್ದ ಮೊತ್ತಗಳು ತಾನಾಗಿಯೇ ಹಿಂದಿರುಗಲಿವೆ. ಹೀಗಾಗಿ ಇಂದು ನಿಮಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇರೋದಿಲ್ಲ. ಮನೆ ನವೀಕರಣ ಕಾರ್ಯ ಕೈಗೊಳ್ಳಲಿದ್ದೀರಿ. ವೈವಾಹಿಕ ಸಂಬಂಧಕ್ಕೆ ಕಳೆದ ಅನೇಕ ವರ್ಷಗಳಿಂದ ಹುಡುಕಾಡುತ್ತಿದ್ದ ನಿಮಗೆ ಶೀಘ್ರದಲ್ಲೇ ಶುಭ ಸುದ್ದಿಯೊಂದು ಕಾದಿದೆ.
ಧನು : ಸಹೋದರನ ಜೊತೆ ಸೇರಿ ವ್ಯವಹಾರ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ನಿಮ್ಮ ಈ ಹೊಸ ಪ್ರಯತ್ನಕ್ಕೆ ಪೋಷಕರಿಂದಲೂ ಪ್ರೋತ್ಸಾಹ ದೊರಕುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಗುರು ಅನುಗ್ರಹದಿಂದ ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ.
ಮಕರ : ವ್ಯವಹಾರಗಳ ವಿಚಾರದಲ್ಲಿ ನೀವಿಂದು ಹೆಚ್ಚು ಜಾಗರೂಕರಾಗಿ ಇರಬೇಕು. ನಿಮ್ಮ ಸಣ್ಣ ನಿರ್ಲಕ್ಷ್ಯವು ದೊಡ್ಡ ತೊಂದರೆಯನ್ನು ನೀಡಬಹುದು. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.
ಕುಂಭ : ನಿಮ್ಮ ಆರೋಗ್ಯದಲ್ಲಿ ಇಂದು ಏರುಪೇರು ಉಂಟಾಗಲಿದೆ. ಹೀಗಾಗಿ ಆದಷ್ಟು ತಣ್ಣನೆಯ ಆಹಾರ ಸೇವನೆ ಮಾಡುವುದನ್ನು ನಿಲ್ಲಿಸಿ. ಮನೆಯಲ್ಲಿರುವ ವೃದ್ಧರು ಕಿರಿಯ ಸದಸ್ಯರಿಗೆ ಉಡುಗೊರೆಯನ್ನು ನೀಡಲಿದ್ದಾರೆ. ಗ್ರಾಮದೇವತೆ ದರ್ಶನಕ್ಕೆ ತೆರಳಲಿದ್ದೀರಿ.
ಮೀನ : ಇಂದು ನೀವು ದೂರದ ಸಂಬಂಧಿಯನ್ನು ಭೇಟಿಯಾಗಲಿದ್ದೀರಿ. ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಮಕ್ಕಳು ಓದಿನ ಕಡೆಗೆ ಹೆಚ್ಚು ಗಮನ ನೀಡಲಿದ್ದಾರೆ. ಎಳ್ಳನ್ನು ದಾನ ಮಾಡಿ.