
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿಯೂ ಚೇತೇಶ್ವರ ಪೂಜಾರ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದ್ದು, ಕೆಟ್ಟ ದಾಖಲೆಗೆ ಸಾಕ್ಷಿಯಾಗಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಪೂಜಾರ ತಾವು ಎದುರಿಸಿದ್ದ ಮೊದಲ ಬೌಲ್ ನಲ್ಲಿಯೇ ಔಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವು ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದರೆ, ಚೇತೇಶ್ವರ ಪೂಜಾರ್ ಮಾತ್ರ ನಿರಾಸೆ ಮೂಡಿಸುತ್ತಿದ್ದಾರೆ. ಮೊದಲ ಬೌಲ್ ನಲ್ಲಿಯೇ ಔಟ್ ಆಗುವ ಮೂಲಕ 3ನೇ ಕ್ರಮಾಂಕದ ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿ ಕೆಟ್ಟ ದಾಖಲೆಗೆ ಸಾಕ್ಷಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ನಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದಿತ್ತು. ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಆಡಿದ್ದರು. ಅರ್ಧ ಶತಕ ಬಾರಿಸುತ್ತಿದ್ದಂತೆ ತಂಡದ ಮೊತ್ತ 117 ಆದಾಗ ಮಯಾಂಕ್ ಔಟ್ ಆಗಿದ್ದರು. ಆ ನಂತರ ಕ್ರಿಸ್ ಗೆ ಬಂದ ಚೇತೇಶ್ವರ ಪೂಜಾರ ವೇಗಿ ಲುಂಗಿ ಎನ್ಗಿಡಿ ಅವರ ಬೌಲಿಂಗ್ ನಲ್ಲಿ ತಾವು ಎದುರಿಸಿದ್ದ ಮೊದಲ ಬೌಲ್ ನಲ್ಲಿಯೇ ಔಟ್ ಆದರು.
BIG NEWS: ಒಮಿಕ್ರಾನ್ ಆತಂಕ, ಮುಂದಿನ ವರ್ಷ ಜ. 31 ರವರೆಗೆ ಅಂತರಾಷ್ಟ್ರೀಯ ವಿಮಾನ ಸ್ಥಗಿತ
ಹೀಗಾಗಿ ಪೂಜಾರ 9ನೇ ಬಾರಿ ಮೊದಲ ಎಸೆತದಲ್ಲಿಯೇ ಔಟ್ ಆಗಿ ಕೆಟ್ಟ ದಾಖಲೆ ಮಾಡಿದ್ದಾರೆ. ಈ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಲೀಪ್ ವೆಂಗಸರ್ಕರ್ ಅವರ ದಾಖಲೆ ಹಿಂದಿಕ್ಕಿ ಕಳಪೆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಅಲ್ಲದೇ, 3ನೇ ಕ್ರಮಾಂಕದಲ್ಲಿ ಮೊದಲ ಬೌಲ್ ಗೆ ಹೆಚ್ಚು ಔಟಾದ ಆಟಗಾರ ಕೂಡ ಇವರೇ ಆಗಿದ್ದಾರೆ. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಭಾರತ ತಂಡದ ಈಗಿನ ಕೋಚ್ ರಾಹುಲ್ ದ್ರಾವಿಡ್ 8 ಬಾರಿ, ಮೊಹಿಂದರ್ ಅಮರ್ ನಾಥ್ 7, ಅಜಿತ್ ವಾಡೇಕರ್ 5 ಬಾರಿ ಔಟ್ ಆಗಿದ್ದಾರೆ.
ಭಾರತ ತಂಡವು ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 273 ರನ್ ಗಳಿಸಿದೆ. ಆದರೆ, ಎರಡನೇ ದಿನ ಮಳೆಯಿಂದಾಗಿ ಪಂದ್ಯ ರದ್ದು ಮಾಡಲಾಯಿತು. ಭಾರತದ ಪರ ಕನ್ನಡಿಗ ಕೆ.ಎಲ್. ರಾಹುಲ್ 122 ಬಾರಿಸಿದ್ದಾರೆ. ಉಳಿದಂತೆ ಮಯಾಂಕ್ 60, ಕೊಹ್ಲಿ 35 ರನ್ ಸಿಡಿಸಿದ್ದಾರೆ. 40 ರನ್ ಬಾರಿಸಿರುವ ಅಜಿಂಕ್ಯ ಹಾಗೂ ರಾಹುಲ್ ಬ್ಯಾಟಿಂಗ್ ಆಡುತ್ತಿದ್ದಾರೆ.