ಚಿಕ್ಕಮಗಳೂರು: ನಾಳೆಯಿಂದ ಹತ್ತು ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ರಾಜ್ಯ ಸರ್ಕಾರ ಅನಗತ್ಯವಾಗಿ ಜನರನ್ನು ಭಯಪಡಿಸುವ ಕೆಲಸ ಮಾಡಬಾರದು. ಮೂಗು ಇದ್ದ ಮೇಲೆ ನೆಗಡಿ ಬರುತ್ತೆ. ನೆಗಡಿ ಬಂದರೆ ಆತಂಕ ಪಡಬೇಕಿಲ್ಲ. ಸದ್ಯ ಜನಜೀವನ ಸಹಜ ಸ್ಥಿತಿಯಲ್ಲಿದೆ. ಆದರೆ ಎಚ್ಚರ ವಹಿಸಬೇಕು. ಭಯ ಹುಟ್ಟಿಸುವ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ಹೇಳುವ ಮೂಲಕ ಸರ್ಕಾರದ ನಿರ್ಣಯಕ್ಕೆ ಚಾಟಿ ಬೀಸಿದ್ದಾರೆ.
ಗುದದ್ವಾರದಲ್ಲಿ ಸಿಲುಕಿದ್ದ ಚೂಪಾದ ವಸ್ತುವನ್ನು ಹೊರತೆಗೆದಿದ್ದಕ್ಕೆ ವೈದ್ಯೆಗೆ ಅಮಾನತು ಶಿಕ್ಷೆ..!
ಇನ್ನುಳಿದಂತೆ ರಾಜ್ಯ ಸರ್ಕಾರ ರಾಜ್ಯ ಸರ್ಕಾರ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ವಿಪಕ್ಷಗಳಿಗೆ ಮಾಡಲು ಬೇರೆ ಕೆಲಸವಿಲ್ಲದೇ ಹತಾಶರಾಗಿದ್ದಾರೆ. ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗುಡುಗಿದರು.