ನವದೆಹಲಿ: ಜನವರಿ 3 ರಿಂದ 15 ರಿಂದ 18 ವರ್ಷದವರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.
ಜನವರಿ 10 ರಿಂದ ಕೊರೋನಾ ವಾರಿಯರ್ಸ್ ಗಳು ಮತ್ತು ಕಾಯಿಲೆ ಇರುವ ವೃದ್ಧರಿಗೆ ಮುಂಜಾಗ್ರತೆಯಿಂದ ಬೂಸ್ಟರ್ ಲಸಿಕೆ ನೀಡಲಾಗುತ್ತದೆ. ಡಿಎನ್ಎ ಹಾಗೂ ಮೂಗಿನ ಮೂಲಕ ಪಡೆಯುವ ಲಸಿಕೆಯನ್ನು ಶೀಘ್ರವೇ ವಿತರಣೆ ಮಾಡಲಾಗುತ್ತದೆ. ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾಗಲಿದೆ. ದೇಶದಲ್ಲಿ 3000 ಆಕ್ಸಿಜನ್ ಘಟಕಗಳಿವೆ. 18 ಲಕ್ಷ ಬೆಡ್ ಗಳು, 1.40 ಲಕ್ಷ ಐಸಿಯು ಬೆಡ್ ಗಳು ಸೇರಿ ಅಗತ್ಯ ವೈದ್ಯಕೀಯ ಸೌಲಭ್ಯವಿದೆ ಎಂದು ಮೋದಿ ಹೇಳಿದ್ದಾರೆ.