ಕ್ರಿಸ್ಮಸ್ ಟ್ರೀ ಇಲ್ಲ ಅಂದ್ರೆ ಹಬ್ಬ ಪರಿಪೂರ್ಣವೇ ಆಗೋದಿಲ್ಲ. ಆದರೆ, ಇಲ್ಲೊಬ್ಬರು ಇಟ್ಟಿರೋ ಕ್ರಿಸ್ಮಸ್ ಟ್ರೀ ಕಂಡ್ರೆ ಇದೇನಪ್ಪಾ ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಾ….!
ಹೌದು, ಮಹಿಳೆಯೊಬ್ಬರು ತನ್ನ ಅಸಾಮಾನ್ಯ ಕ್ರಿಸ್ಮಸ್ ಟ್ರೀ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಅಸುರಕ್ಷಿತ ಎಂಬ ನೆಟ್ಟಿಗರ ಟ್ರೋಲ್ಗಳಿಗೆ ಅವರು ತಿರುಗೇಟನ್ನೂ ನೀಡಿದ್ದಾರೆ.
31 ವರ್ಷದ ಮೆಲಿಸ್ಸಾ ವೆಬ್ಬರ್ ಎಂಬುವವರು ತಲೆಕೆಳಗಾದ ಕ್ರಿಸ್ಮಸ್ ಟ್ರೀ ಚಿತ್ರವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾಳೆ. ತನ್ನ ಮಗಳು ಮತ್ತು ನಾಯಿಯು ಮರವನ್ನು ನಾಶಪಡಿಸುವುದನ್ನು ತಡೆಯಲು ಕಳೆದ ನಾಲ್ಕು ವರ್ಷಗಳಿಂದ ಮರವನ್ನು ಚಮತ್ಕಾರಿ ಶೈಲಿಯಲ್ಲಿ ಇರಿಸಲು ಪ್ರಾರಂಭಿಸಿದ್ದಾಳೆ.
ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಇನ್ನೆಸ್ ಪಾರ್ಕ್ನಲ್ಲಿ ಸ್ಥಳೀಯ ಸಮುದಾಯ ಪಬ್ ಮ್ಯಾನೇಜರ್ ಆಗಿರುವ ಮೆಲಿಸ್ಸಾ, ಕ್ರಿಸ್ಮಸ್ ಟ್ರೀಯನ್ನು ತಲೆಕೆಳಗಾಗಿ ಇರಿಸಿದ್ದಾಳೆ. ತನ್ನ ಕ್ರಿಸ್ಮಸ್ ಟ್ರೀ ಅಚ್ಚುಕಟ್ಟಾಗಿ ಕಾಣುತ್ತದೆ ಎಂದು ಆಕೆ ಹೇಳಿದ್ದಾಳೆ.
ಇದು ಸಾಮಾನ್ಯವಾಗಿ ಅಸುರಕ್ಷಿತ ಮತ್ತು ಅನಗತ್ಯ ಎಂದು ಜನರು ಹೇಳುತ್ತಿದ್ದರು. ಆದರೆ ಈಕೆ ಐದು ಮಕ್ಕಳು, ಮೂರು ನಾಯಿಗಳು ಮತ್ತು ಬೆಕ್ಕುಗಳನ್ನು ಹೊಂದಿದ್ದಾರೆ. ಹೀಗಾಗಿ ಸುಂದರವಾಗಿ ಅಲಂಕಾರ ಮಾಡಿದ ಕ್ರಿಸ್ಮಸ್ ಟ್ರೀಯನ್ನು ಮಕ್ಕಳು ಹಾಳುಗೆಡುವಿದ್ದರು. ಇದನ್ನು ತಪ್ಪಿಸಲು ಮರವನ್ನು ಈ ರೀತಿ ತಲೆಕೆಳಗಾಗಿ ಇಡಲಾಗಿದೆ. ಸದ್ಯ, ಈ ಪೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.