alex Certify 35 ವರ್ಷ, 400 ವಿಚಾರಣೆ….! ಸುದೀರ್ಘ ನ್ಯಾಯಾಂಗ ಹೋರಾಟದಲ್ಲಿ ಕೊನೆಗೂ ಜಯ ಸಾಧಿಸಿದ 85ರ ವೃದ್ಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ವರ್ಷ, 400 ವಿಚಾರಣೆ….! ಸುದೀರ್ಘ ನ್ಯಾಯಾಂಗ ಹೋರಾಟದಲ್ಲಿ ಕೊನೆಗೂ ಜಯ ಸಾಧಿಸಿದ 85ರ ವೃದ್ಧ

ನ್ಯಾಯದ ಅಪಹಾಸ್ಯ ಎಂದು ಹೇಳಬಹುದಾದ ಘಟನೆಯೊಂದು ನಡೆದಿದೆ. ಮನೆಯಲ್ಲಿ ಕೀಟನಾಶಕ ತಯಾರಿಸಿದ ಆರೋಪದ ಮೇಲೆ 1986ರಲ್ಲಿ ಶಾಮ್ಲಿ ಜಿಲ್ಲೆಯ ಹರನ್ ಗ್ರಾಮದ ಧರಂಪಾಲ್ ಸಿಂಗ್, ಅವರ ಸಹೋದರ ಕುನ್ವಾರ್ ಪಾಲ್ ಮತ್ತು ಇನ್ನೊಬ್ಬ ವ್ಯಕ್ತಿ ಲಿಖಾಯತ್ ಮೇಲೆ ಐಪಿಸಿ ಸೆಕ್ಷನ್ 420 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದೇ ಆರೋಪದ ಮೇಲೆ 18 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ, ಮೂವರಿಗೆ ಜಾಮೀನು ನೀಡಲಾಯಿತು. ಆದರೆ ನಾವು ತಪ್ಪು ಮಾಡಿಲ್ಲ, ಈ ಅಪರಾಧದಿಂದ ನಮ್ಮ ಹೆಸರು ತೆರವುಗೊಳಿಸಿ ಎಂದು ಅಂದಿನಿಂದಲೂ ಹೋರಾಟ ನಡೆಸುತ್ತಿದ್ದರು. ಅಂತಿಮವಾಗಿ, 35 ವರ್ಷಗಳ ಕಾನೂನು ಹೋರಾಟದ ನಂತರ, ಬುಧವಾರ, ಹೆಚ್ಚುವರಿ ಮುಖ್ಯ ನ್ಯಾಯಾಂಗ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಮೂವರನ್ನು ಖುಲಾಸೆಗೊಳಿಸಿದೆ.

ಸಧ್ಯ ಧರಂಪಾಲ್ ಸಿಂಗ್ ಗೆ 85 ವರ್ಷ ವಯಸ್ಸು, ಈ ವಯಸ್ಸಿನಲ್ಲೂ ತಮ್ಮನ್ನು ತಾವು ನಿರಪರಾಧಿ ಎಂದು ಸಾಬೀತುಪಡಿಸಲು 400 ಬಾರಿ ಕೋರ್ಟ್ ಗೆ ಹಾಜರಾಗಿದ್ದರು. ಅವರ ವಕೀಲರ ಪ್ರಕಾರ, ಅವರನ್ನು ಬಂಧಿಸುವಾಗ ವಶಪಡಿಸಿಕೊಂಡ 26 ಚೀಲಗಳು ಕೀಟನಾಶಕ ಗ್ಯಾಮೆಕ್ಸೇನ್ ಎಂದು ಸಾಬೀತುಪಡಿಸಲು ಠಾಣಾ ಭವನ ಪೊಲೀಸರು ವಿಫಲರಾಗಿದ್ದು, ಇಷ್ಟು ದಿನಗಳ ಕಾಲ ಧರಂಪಾಲ್ ಹೊತ್ತಿದ್ದ ಆರೋಪ ಖುಲಾಸೆಗೊಂಡಿದೆ‌.

ನ್ಯಾಯಾಲಯದ ಆದೇಶದೊಂದಿಗೆ, ಧರಂಪಾಲ್ ಸ್ವತಂತ್ರ ವ್ಯಕ್ತಿಯಾಗಿದ್ದಾರೆ, ತಲೆಮರೆಸಿಕೊಂಡಿದ್ದಾನೆ ಎಂದು ಅಲಿಯ ಮೇಲಿದ್ದ ಆರೋಪ ಮುಗಿದಿದೆ. ಮೂರನೇ ಆರೋಪಿ ಧರಂಪಾಲ್ ಅವರ ಸಹೋದರ ಕುನ್ವರ್‌ಪಾಲ್ ಅವರು ಐದು ವರ್ಷಗಳ ಹಿಂದೆ ಸಾವನ್ನಪ್ಪಿದ್ದರಿಂದ ಶುಭ ಸುದ್ದಿ ಕೇಳಲು ಅವರಿಲ್ಲ.

ಸುದೀರ್ಘ ಕಾನೂನು ಹೋರಾಟದಲ್ಲಿ ನಾನು ನನ್ನ ಖ್ಯಾತಿ, ಹಣ ಮತ್ತು ಮಾನಸಿಕ ಶಾಂತಿಯನ್ನು ಕಳೆದುಕೊಂಡಿದ್ದೇನೆ. ನ್ಯಾಯ ಸಿಗಲು ಬಹಳ ಸಮಯ ತೆಗೆದುಕೊಂಡಿದ್ದೇನೆ, ಆದರೆ ಈಗ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ನನಗೆ ಸಂತೋಷವಾಗಿದೆ. ನನಗೆ ಪರಿಹಾರ ನೀಡಿದ ಗೌರವಾನ್ವಿತ ನ್ಯಾಯಾಲಯಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಪ್ರಕರಣದಲ್ಲಿ ಸುಮಾರು 400 ಬಾರಿ ವಿಚಾರಣೆಗೆ ಹಾಜರಾಗಲು ಸಾಕಷ್ಟು ಹಣ ಮತ್ತು ಸಮಯವನ್ನು ಕಳೆದುಕೊಂಡು ಈಗ ನಾನು ನಿರಪರಾಧಿ ಎಂದು ಸಾಬೀತಾಗಿರುವುದೇ ನನಗೆ ಸಂತಸದ ವಿಷಯ ಎಂದು ಧರಂಪಾಲ್ ಹೇಳಿದ್ದಾರೆ‌.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...