ಕಳೆದ ಎರಡು ತಿಂಗಳಿಂದ ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಜನರೊಂದಿಗೆ ಬೆರೆಯುತ್ತಿರುವ ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಭಿ ಆಜಾದ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಜಮ್ಮು-ಕಾಶ್ಮೀರದ ಗೂಲ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಭೇಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಜಮ್ಮು-ಕಾಶ್ಮೀರದ ಜನರು ಬಡತನದತ್ತ ಸಾಗುತ್ತಿದ್ದಾರೆ. ವ್ಯಾಪಾರ ವಹಿವಾಟಿಲ್ಲ, ಉದ್ಯೋಗಗಳಿಲ್ಲ ಇದರ ನಡುವೆ ಬೆಲೆ ಏರಿಕೆ ಇಲ್ಲಿನ ಜನರನ್ನ ಮತ್ತಷ್ಟು ಬಡತನಕ್ಕೀಡು ಮಾಡಿದೆ ಎಂದಿದ್ದಾರೆ.
ಭಾರತೀಯ ಸೇನೆಯಿಂದ ಭರ್ಜರಿ ಬೇಟೆ: ಇಬ್ಬರು ಲಷ್ಕರ್ ಉಗ್ರರು ಸೇರಿ 4 ಭಯೋತ್ಪಾದಕರ ಸದೆಬಡಿದ ಯೋಧರು
ಆಗಿನ ಕಾಲದ ರಾಜ- ಮಹಾರಾಜರ ಆಡಳಿತ ಈಗಿನ ಕೇಂದ್ರ ಸರ್ಕಾರದ ನೀತಿಗಿಂತ ಉತ್ತಮವಾಗಿದ್ದವು. ಸಾಂಪ್ರದಾಯಿಕ ದ್ವೈವಾರ್ಷಿಕ ದರ್ಬಾರ್ ನಿಯಮವನ್ನ ರದ್ದುಗೊಳಿಸಿರುವುದರಿಂದ ಆಗಿರುವ ಪ್ರಯೋಜನ ಆದರು ಏನು. ಮೊದಲಿಂದಲು ನಾನು ದರ್ಬಾರ್ ಆಡಳಿತಕ್ಕೆ ನನ್ನ ಸಹಮತವಿತ್ತು, ಈ ಕಾರ್ಯತಂತ್ರದಡಿಯಲ್ಲಿ ಜಮ್ಮು ಹಾಗೂ ಕಾಶ್ಮೀರ ಎರಡು ಭಾಗದ ಜನರಿಗೆ ಕೆಲಸ ಹಾಗೂ ಸೌಲಭ್ಯಗಳು ದೊರೆಯುತ್ತಿದ್ದವು. ದರ್ಬಾರ್ ಆಡಳಿತ ಆರಂಭಿಸಿದ್ದ ಹರಿಸಿಂಗ್ ಮಹಾರಾಜನನ್ನ ಸರ್ವಾಧಿಕಾರಿ ಎಂದು ಕರೆಯುತ್ತಿದ್ದರು, ಆದರೆ ಪ್ರಸ್ತುತ ಇರುವ ಕೇಂದ್ರದ ಆಡಳಿತಕ್ಕಿಂತ ಆತನ ಆಡಳಿತ ಉತ್ತಮವಾಗಿತ್ತು. ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನ ರದ್ದುಗೊಳಿಸಿ ನಮ್ಮಿಂದ ಅಭಿವೃದ್ಧಿಯನ್ನ ಕಸಿದುಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.