ಚಂಡೀಗಢ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು 22 ರೈತ ಸಂಘಟನೆಗಳು ತೀರ್ಮಾನ ಕೈಗೊಂಡಿವೆ.
ಚುನಾವಣೆಯಲ್ಲಿ ಸ್ಪರ್ಧೆಗಾಗಿ ಹೊಸದಾಗಿ ಒಕ್ಕೂಟ ಸ್ಥಾಪಿಸಲಾಗಿದೆ. ಸಂಯುಕ್ತ ಸಮಾಜ ಮೋರ್ಚಾ ಒಕ್ಕೂಟವನ್ನು ರಚನೆ ಮಾಡಲಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ ರಾಜ್ಯದ ಎಲ್ಲಾ 117 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಂಯುಕ್ತ ಸಮಾಜ ಮೋರ್ಚಾ ರಾಜಕೀಯ ರಂಗ ನಿರ್ಧರಿಸಿದೆ.
ಪಕ್ಷವನ್ನು ಬಲವೀರ್ ಸಿಂಗ್ ರಾಜೇವಾಲ್ ಮುನ್ನಡೆಸಲಿದ್ದಾರೆ. ಬಿಕೆಯು ಸೇರಿದಂತೆ ಮೂರು ಕೃಷಿ ಸಂಘಟನೆಗಳು ಕೂಡ ಸಂಯುಕ್ತ ಸಮಾಜ ಮೋರ್ಚಾ ಸೇರುವ ಬಗ್ಗೆ ತೀರ್ಮಾನ ಕೈಗೊಳ್ಳಲಿವೆ ಎಂದು ಹೇಳಲಾಗಿದೆ.