2020-2021ರಲ್ಲಿ ಭಾರತದ ಕೊರೋನಾ ಪರಿಸ್ಥಿತಿ ದೇಶದ ಆರ್ಥಿಕ ಸ್ಥಿತಿಯನ್ನ ಹದಗೆಡಿಸಿದೆ. ಲಾಕ್ ಡೌನ್ ಸೇರಿ ಕೊರೋನಾ ಕಠಿಣ ನಿಯಮಗಳಿಂದ ಭಾಗಶಃ ಎಲ್ಲಾ ಕ್ಷೇತ್ರದಲ್ಲು ನಷ್ಟವಾಗಿರೋದು ಹೊಸ ವಿಷಯವೇನಿಲ್ಲ.
ಆದರೆ ಈ ಎಲ್ಲಾ ನಷ್ಟದ ನಡುವೆ ಜವಳಿ ಉದ್ಯಮ ಲಾಭ ಕಂಡಿದೆ ಎಂದು ಹೇಳಲಾಗ್ತಿದೆ. ಈ ಮೂಲಕ ಭಾರತದ ವ್ಯಾಪಾರೋದ್ಯಮವನ್ನು ಫ್ಯಾಷನ್ ಇಂಡಸ್ಟ್ರಿ ಉಳಿಸಬಹುದು, ಈ ಇಂಡಸ್ಟ್ರಿಯೆ ಭಾರತದ ವ್ಯಾಪಾರೋದ್ಯಮದ ಭವಿಷ್ಯ ಎನ್ನಲಾಗ್ತಿದೆ. ಅದ್ರಲ್ಲು ಭಾರತದ ಅತ್ಯಂತ ದುಬಾರಿ ಡಿಸೈನರ್ ಗಳ ಈ ವರ್ಷದ ಅಂಕಿ ಅಂಶ ಫ್ಯಾಷನ್ ಇಂಡಸ್ಟ್ರಿಗೆ ಹೊಸ ಭರವಸೆ ನೀಡಿದೆ.
ಗೂಗಲ್ ಹಾಗೂ ಫೇಸ್ ಬುಕ್ ಗೆ ರಷ್ಯಾ ನ್ಯಾಯಾಲಯದಿಂದ ಭಾರೀ ದಂಡ..!
ಮದುವೆ ಅನ್ನೋದು ಭಾರತೀಯ ಸಂಪ್ರದಾಯ ಅತ್ಯಂತ ಮುಖ್ಯ ಘಟ್ಟ. ಕೊರೋನಾ ಸಂದರ್ಭದಲ್ಲಂತು ಎಲ್ಲೆಡೆ ಮದುವೆ ಸುದ್ದಿಗಳೆ ಕೇಳಿ ಬರ್ತಿದ್ದವು. ಹಲವಾರು ಸೆಲೆಬ್ರೆಟಿಗಳು ಈ ಸಂದರ್ಭದಲ್ಲೆ ಮದುವೆಯಾಗಿದ್ದಾರೆ.
ಒಟ್ಟಿನಲ್ಲಿ ಯಾವುದೇ ಕ್ಷೇತ್ರದಲ್ಲಿ ನಷ್ಟವಾದರು ಜವಳಿ ಮಾತ್ರ ಭಾರತದ ಪುರಾತನ ಲಾಭದಾಯಕ ವ್ಯಾಪಾರ ಅನ್ನೋದು ಮತ್ತೆ ಸಾಬೀತಾಗಿದೆ. ಇನ್ನು ದೇಶದ ದುಬಾರಿ ಡಿಸೈನರ್ ಸಬ್ಯಸಾಚಿಯವರ ವಾರ್ಷಿಕ ವಹಿವಾಟಿನ ಅಂಕಿಅಂಶ ಬಿಡುಗಡೆಯಾಗಿದ್ದು, ಸಬ್ಯಸಾಚಿ ಈ ವರ್ಷ 270-275 ಕೋಟಿ ವ್ಯವಹಾರ ನಡೆಸಿದೆ. ಈ ಮೂಲಕ ಕೊರೋನಾ ಇದ್ದರು ಫ್ಯಾಷನ್ ಇಂಡಸ್ಟ್ರಿ ಬೆಳೆಯುತ್ತಿರುವುದು ಹೊಸ ಉದ್ಯಮಿಗಳ ಭರವಸೆಗೆ ಕಾರಣವಾಗಿದೆ.