ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಭಕ್ತರಿಗಾಗಿ ವಿಶೇಷ ದರ್ಶನದ ಟಿಕೆಟ್ ಗಳನ್ನು ಟಿಟಿಡಿ ಬಿಡುಗಡೆ ಮಾಡಿದ್ದು, ಜನವರಿಯಲ್ಲಿ ಬರುವ ಭಕ್ತರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ.
ಟಿಟಿಡಿಯು 4.60 ಲಕ್ಷ ವಿಶೇಷ ಟಿಕೆಟ್ ಗಳನ್ನು ಜನವರಿ ತಿಂಗಳಿಗಾಗಿ ಬಿಡುಗಡೆ ಮಾಡಿದ್ದು, ಕೇವಲ 80 ನಿಮಿಷಗಳಲ್ಲಿಯೇ ಟಿಕೆಟ್ ಗಳು ಖಾಲಿಯಾಗಿವೆ.
ಜನವರಿಯಲ್ಲಿ ವೈಕುಂಠ ಏಕಾದಶಿ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ವೆಂಕಟೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ. ಹೀಗಾಗಿ ದೇವಸ್ಥಾನ ಆಡಳಿತ ಮಂಡಳಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ರಾರಂಭಿಸಿತ್ತು. ಈ ಟಿಕೆಟ್ ದರ 300 ರೂಪಾಯಿ ಇತ್ತು. ಆದರೆ, ಭಕ್ತರು ಕೇವಲ 80 ನಿಮಿಷಗಳಲ್ಲಿಯೇ ಟಿಕೆಟ್ ಗಳನ್ನು ಬುಕ್ ಮಾಡಿದ್ದಾರೆ.
ಟಿಕೆಟ್ ಪಡೆದ ಭಕ್ತರಿಗೆ ವಿಶೇಷ ದರ್ಶನದ ಮೂಲಕ ಟಿಟಿಡಿ, ವೆಂಕಟೇಶ್ವರನ ದರ್ಶನಕ್ಕೆ ಅವಕಾಶ ನೀಡಲಿದೆ. ಅಲ್ಲದೇ, ಸರ್ವದರ್ಶನಂ ಟಿಕಟ್ ಗಳನ್ನು ಕೂಡ ಇದೇ ತಿಂಗಳ ಅಂತ್ಯದಲ್ಲಿ ಟಿಟಿಡಿ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಭಕ್ತರು ಈ ಟಿಕೆಟ್ ಬುಕ್ ಮಾಡಲು ಕಾಯುತ್ತಿದ್ದಾರೆ.