ಶಿವಮೊಗ್ಗ: ಶಿವಮೊಗ್ಗ -ಬೆಂಗಳೂರು ರೈಲಿಗೆ ವಿಸ್ಟಾಡೋಮ್ ಬೋಗಿ ಅಳವಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗುತ್ತದೆ.
ಈಗಾಗಲೇ ಬೆಂಗಳೂರು -ಮಂಗಳೂರು ಮಾರ್ಗದಲ್ಲಿ ವಿಸ್ಟಾಡೋಮ್ ಬೋಗಿ ಪ್ರಯಾಣಿಕರನ್ನು ಸೆಳೆದಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಅಳವಡಿಸಲಾದ ವಿಸ್ಟಾಡೋಮ್ ಬೋಗಿ ಮೂಲಕ ಪ್ರಯಾಣದ ವೇಳೆಯಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅದೇ ರೀತಿ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿಯೂ ವಿಸ್ಟಾಡೋಮ್ ಬೋಗಿಯನ್ನು ಅಳವಡಿಸಲಾಗುತ್ತದೆ. ತಾತ್ಕಾಲಿಕವಾಗಿ ಯಶವಂತಪುರ -ಶಿವಮೊಗ್ಗ -ಯಶವಂತಪುರ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿಗೆ ವಿಸ್ಟಾಡೋಮ್ ಬೋಗಿ ಅಳವಡಿಸಲಾಗುವುದು.
ಡಿಸೆಂಬರ್ 25 ರಿಂದ 31 ರವರೆಗೆ ವಿಸ್ಟಾಡೋಮ್ ಬೋಗಿಯಲ್ಲಿ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಪ್ರಕೃತಿ ಸೌಂದರ್ಯ ವೀಕ್ಷಿಸಲು ದೊಡ್ಡದಾದ ಗಾಜಿನ ಕಿಟಕಿಗಳು ಮತ್ತು ಛಾವಣಿಯ ವ್ಯವಸ್ಥೆ ಇರಲಿದೆ. ಇದರಲ್ಲಿನ ಸೀಟುಗಳನ್ನು ಯಾವುದೇ ದಿಕ್ಕಿಗೆ ತಿರುಗಿಸುವಂತಿದ್ದು, ಪ್ರಯಾಣದ ವೇಳೆ ಪ್ರಯಾಣಿಕರಿಗೆ ವಿಶೇಷ ಅನುಭವ ಸಿಗಲಿದೆ ಎನ್ನಲಾಗಿದೆ.