alex Certify ಅಟ್ಲಾಂಟಾದಲ್ಲಿ ‘ತೇರಿ ಮಿಟ್ಟಿ’ ಹಾಡಿದ ಜಾನಪದ ಗಾಯಕಿ ಗೀತಾ ಬೆನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಟ್ಲಾಂಟಾದಲ್ಲಿ ‘ತೇರಿ ಮಿಟ್ಟಿ’ ಹಾಡಿದ ಜಾನಪದ ಗಾಯಕಿ ಗೀತಾ ಬೆನ್

Gujarati folk singer Geeta Ben Rabari sings Teri Mitti at event in Atlanta  in viral video. Manoj Muntashir reacts - Trending News Newsದೇಶಭಕ್ತಿಗೀತೆಯನ್ನು ಕೇಳಿದ್ರೆ ಮೈಯೆಲ್ಲಾ ರೋಮಾಂಚನವಾದಂತಾಗುತ್ತದೆ. ಭಾರತೀಯ ಹಲವಾರು ಸಿನಿಮಾಗಳಲ್ಲೂ ಕೂಡ ನಾವು ದೇಶಭಕ್ತಿ ಗೀತೆಯನ್ನು ಕೇಳುತ್ತೇವೆ. ಯಾರಾದ್ರೂ  ಅತ್ಯಂತ ಭಾವಪೂರ್ಣವಾದ ದೇಶಭಕ್ತಿ ಗೀತೆಗಳ ಲಿಸ್ಟ್ ಮಾಡಿದ್ರೆ, ಅದರಲ್ಲಿ ತೇರಿ ಮಿಟ್ಟಿ ಹಾಡು ಖಂಡಿತವಾಗಿಯೂ ಸ್ಥಾನ ಪಡೆದುಕೊಳ್ಳುತ್ತದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ 2019 ರ ʼಕೇಸರಿʼ ಚಲನಚಿತ್ರದ ತೇರಿ ಮಿಟ್ಟಿ ಹಾಡು ಸೂಪರ್ ಡೂಪರ್ ಹಿಟ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಗುಜರಾತ್ ನ ಜಾನಪದ ಗಾಯಕಿ ಗೀತಾ ಬೆನ್ ರಾಬರಿ ಅವರು ಈ ಹಾಡು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೀತಾ ಬೆನ್ ಅವರು ಯುಎಸ್ ನ ಅಟ್ಲಾಂಟಾದಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಅದ್ಭುತ ಹಾಡನ್ನು ಹಾಡಿದ್ದಾರೆ. ಡಿಸೆಂಬರ್ 22 ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ರಾಷ್ಟ್ರಧ್ವಜವನ್ನು ಬೀಸುತ್ತಾ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದಾರೆ. ಈ ವೇಳೆ ಅವರು ಸಾಂಪ್ರದಾಯಿಕ ಲೆಹೆಂಗಾ ಚೋಲಿಯನ್ನು ಧರಿಸಿದ್ದರು.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸುಮಾರು 2 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಆಕೆಯ ಸುಮಧುರ ಕಂಠಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಗೀತಾ ಬೆನ್ ಹಾಡು ಗೀತರಚನೆಕಾರ ಮನೋಜ್ ಮುಂತಾಶಿರ್ ಅವರ ಗಮನ ಸೆಳೆದಿದೆ. ಅಧ್ಭುತವಾಗಿ ಹಾಡಿದ್ದಕ್ಕೆ ಗೀತಾ ಬೆನ್ ಅವರಿಗೆ ಮುಂತಾಶಿರ್ ಪ್ರಶಂಸಿದ್ದಾರೆ.

https://www.facebook.com/watch/?v=2745855012382454&t=11

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...