ಭಾರತ ಸ್ವಾತಂತ್ರ್ಯ ಪಡೆದು 75 ವರ್ಷವಾಗಿದೆ, ಅಂದರೆ ಇದು ನಮಗೆ ಅಮೃತ ಮಹೋತ್ಸವ. ಇದೆ ಹೆಸರಿನಡಿಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ, ಕೇಂದ್ರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ರಾಜ್ಯದ ಯುವಜನ ಮತ್ತು ಕ್ರೀಡಾ ಇಲಾಖೆಯು ಯುವಜನತೆಯ ಸಾಧನೆಗೆ ಬೆಂಬಲ ನೀಡುತ್ತಿದೆ.
ಇದರ ಫಲಿತಾಂಶವಾಗಿ ಅಂಟಾರ್ಟಿಕದ ಮೌಂಟ್ ವಿನ್ಸನ್ ಶಿಖರದಲ್ಲಿ ತ್ರಿವರ್ಣ ಧ್ವಜ ರೂಪಗೊಂಡಿದೆ. ಈ ಮೂಲಕ ಡಾರ್ಜಿಲಿಂಗ್‌ನ ಹಿಮಾಲಯನ್ ಮೌಂಟೇನಿಯರಿಂಗ್ ಇನ್‌ಸ್ಟಿಟ್ಯೂಟ್ (HMI) ಮಿಷನ್ ಅಂಟಾರ್ಟಿಕಾ 2021 ಪೂರ್ಣಗೊಂಡಿದೆ.
ಮಿಷನ್ ಅಂಟಾರ್ಟಿಕ 2021 ಭಾರತದಿಂದ ಹಿಮನಾಡಿನ ಪ್ರಯಾಣಕ್ಕಿಟ್ಟಿರುವ ನಾಮಕರಣ, ಮೂವರು ಸದಸ್ಯರನ್ನು ಒಳಗೊಂಡ ಈ ದಂಡಯಾತ್ರೆ ಯಶಸ್ವಿಯಾದ ಸಲುವಾಗಿ 7,500 ಚದರ ಅಡಿಗಳಷ್ಟು ಎತ್ತರದ ಅಂಟಾರ್ಕ್ಟಿಕಾದಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸಿತು.
ಇಂಥಾ ಸಾಹಸದ ಮೂಲಕ ಭಾರತದ ಜನರು ಮತ್ತು ಯುವಕರಲ್ಲಿ ದೇಶಭಕ್ತಿಯನ್ನು ಉತ್ತೇಜಿಸಲು ಗ್ರೂಪ್ ಕ್ಯಾಪ್ಟನ್ ಜೈ ಕಿಶನ್ ನೇತೃತ್ವದಲ್ಲಿ ಈ ದಂಡಯಾತ್ರೆಯನ್ನು ನಡೆಸಲಾಯಿತು. ಕ್ಯಾಪ್ಟನ್ ಗೆ ನಾಯಕ್ ಸುಬೇದಾರ್ ಮಹೇಂದ್ರ ಯಾದವ್ ಮತ್ತು ಸುಮೇಂದು ಸಾಥ್ ನೀಡಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಗಸ್ಟ್ 17 ರಂದು ಅಂಟಾರ್ಕ್ಟಿಕಾಕ್ಕೆ ದಂಡಯಾತ್ರೆಗೆ ಅಸ್ತು ಎಂದಿದ್ದರು. ನವೆಂಬರ್ 26 ರಂದು ಮೂವರು ಸದಸ್ಯರ ತಂಡವು ಸ್ಥಳಾಂತರಗೊಂಡು ಮೌಂಟ್ ವಿನ್ಸನ್ ಬೇಸ್ ಕ್ಯಾಂಪ್ ಅನ್ನು ಸ್ಥಾಪಿಸಿದ ನಂತರ ಯಾವುದೇ ವಿಶ್ರಾಂತಿ ಸಮಯವನ್ನು ಹೊಂದದೆ ದೈತ್ಯಾಕಾರದ ಭಾರತೀಯ ಧ್ವಜವನ್ನು ಪ್ರದರ್ಶಿಸಿತು.
ಇದು ಅಂಟಾರ್ಟಿಕಾದಲ್ಲಿ ಇಂತಹ ದೈತ್ಯಾಕಾರದ ಧ್ವಜವನ್ನು ಪ್ರದರ್ಶಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಕಾರಣವಾಗಿದೆ. ನವೆಂಬರ್ 30 ರಂದು ಸಮುದ್ರ ಮಟ್ಟದಿಂದ 16,050 ಅಡಿ ಎತ್ತರದಲ್ಲಿರುವ ಮೌಂಟ್ ವಿನ್ಸನ್‌ನಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸಿತು. ಮುಂದಿನ ಮೂರು ದಿನಗಳಲ್ಲಿ, ತಂಡವು ಧ್ರುವ ಚಂಡಮಾರುತವನ್ನು ಎದುರಿಸಿದ್ದು ಮಾತ್ರವಲ್ಲದೆ ಜರ್ಮನಿಯಿಂದ ಬಂದ ಇಬ್ಬರು ಆರೋಹಿಗಳನ್ನು ರಕ್ಷಿಸಿದೆ.