ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣನವರು ತಮ್ಮ ಹುಟ್ಟೂರಿಗೆ ಎತ್ತಿನ ಗಾಡಿಯ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ರಮಣನವರ ಹುಟ್ಟೂರು. ಹಳ್ಳಿಯ ಹೊರಭಾಗದಿಂದ ಎತ್ತಿನ ಗಾಡಿ ಹತ್ತಿದ ಎನ್.ವಿ. ರಮಣನವರು, ತಮ್ಮ ಹೆಂಡತಿಯೊಂದಿಗೆ ಹುಟ್ಟೂರಿಗೆ ಬಂದಾಗ ಭರ್ಜರಿ ಸ್ವಾಗತ ದೊರೆತಿದೆ.
ಚೀಫ್ ಜಸ್ಟೀಸ್ ಆದಮೇಲೆ ಮೊದಲ ಬಾರಿಗೆ ತಮ್ಮ ಸ್ವಂತ ಊರಿಗೆ ಆಗಮಿಸಿದ ನ್ಯಾಯಮೂರ್ತಿಯವರನ್ನ ಸ್ವಾಗತಿಸಲು ಇಡೀ ಹಳ್ಳಿಗೆ ಹಳ್ಳಿಯೆ ಸಿದ್ಧವಾಗಿತ್ತು.
ಚೀಫ್ ಜಸ್ಟೀಸ್ ರವರು ಕುಳಿತ ಎತ್ತಿನ ಗಾಡಿಗೆ ಸುಂದರ ಅಲಂಕಾರ ಮಾಡಲಾಗಿತ್ತು. ಗಾಡಿ ಹಳ್ಳಿಯ ಹೆಬ್ಬಾಗಿಲಿಗೆ ಬರುತ್ತಿದ್ದಂತೆ, ಅಲ್ಲಿ ನೆರೆದಿದ್ದ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ರಮಣ ದಂಪತಿಯನ್ನ ಬರಮಾಡಿಕೊಂಡರು.
ಜಾನಪದ ನೃತ್ಯ, ಹಾಡು ಹಾಗೂ ಸಂಗೀತ ವಾದ್ಯಗಳನ್ನ ಬಾರಿಸಿ ಮುಖ್ಯ ನ್ಯಾಯಮೂರ್ತಿಯವರಿಗೆ ಅದ್ಭುತ ಸ್ವಾಗತ ಕೋರಿದರು. ಇದಕ್ಕೂ ಮೊದಲು ನ್ಯಾಯಮೂರ್ತಿಯವರು ಜಿಲ್ಲೆಯ ಗಡಿಗೆ ಆಗಮಿಸಿದಾಗ ಜಿಲ್ಲಾಧಿಕಾರಿ, ಪೊಲೀಸ್ ಉನ್ನತಾಧಿಕಾರಿ ಹಾಗೂ ಸ್ಥಳೀಯ ರಾಜಕೀಯ ನಾಯಕರು ಅವರ ಸ್ವಾಗತ ಕೋರಿದ್ದರು. ತಮ್ಮ ಹಳ್ಳಿಯಲ್ಲಿ ನಾಲ್ಕು ಗಂಟೆಗಳ ಕಾಲ ಇದ್ದು, ನ್ಯಾಯಮೂರ್ತಿಯವರು ಮತ್ತೆ ವಿಜಯವಾಡಕ್ಕೆ ವಾಪಸ್ಸಾಗಲಿದ್ದಾರೆ.
https://twitter.com/madamanchis/status/1474274485708591105?ref_src=twsrc%5Etfw%7Ctwcamp%5Etweetembed%7Ctwterm%5E1474274485708591105%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fnews%2Findia%2Fcji-nv-ramana-wife-bullock-cart-ride-native-village-andhra-pradesh-krishna-district-ponnavaram-video-watch-5153611%2F