ಬೆಂಗಳೂರು: ಫುಡ್ ಡೆಲಿವರಿ ಬಾಯ್ ಒಬ್ಬನನ್ನು ಮಹಿಳಾ ಸಿಬ್ಬಂದಿಯೇ ಹಿಡಿದು ಥಳಿಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಸಂಜಯ್ ಮಹಿಳೆಯಿಂದ ಹಲ್ಲೆಗೊಳಗಾದ ಫುಡ್ ಡೆಲಿವರಿ ಬಾಯ್. ಫುಡ್ ಪ್ಯಾಕೆಟ್ ನೀಡಲು ತಡವಾಗುತ್ತಿದೆ, ಗ್ರಾಹಕರು ಈ ಬಗ್ಗೆ ಪ್ರಶ್ನಿಸುತ್ತಾರೆ ಎಂದು ಡೆಲಿವರಿ ಬಾಯ್ ಮಹಿಳಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಕೋಪಗೊಂಡ ಮಹಿಳೆ ಆತನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.
ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ಕಳ್ಳತನದ ಆರೋಪದಲ್ಲಿ ಕಾನ್ಸ್ ಟೇಬಲ್ ಬಂಧನ….!
ಉತ್ತರ ಪ್ರದೇಶ ಮೂಲದ ಮಹಿಳೆಯಾಗಿದ್ದು, ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಡೆಲಿವರಿ ಬಾಯ್ ಮೇಲೆ ಮಹಿಳೆ ನಡೆಸಿರುವ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮಹಿಳೆ, ಡೆಲಿವರಿ ಬಾಯ್ ಕೊರಳಪಟ್ಟಿ ಹಿಡಿದು ಹೋಟೆಲ್ ನಿಂದ ಹೊರಕ್ಕೆ ಎಳೆದು ತಂದು ರಸ್ತೆಗೆ ನೂಕಿದ್ದಾಳೆ. ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.