ತಮಿಳುನಾಡಿನ ಕೊಯಂಬತ್ತೂರು ನಗರದಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಿಂಡು ತಿರುಗಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ರಾತ್ರಿ ವೇಳೆ ಹೆಚ್ಚಿನ ನಿಗಾ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ಡಿಸೆಂಬರ್ 22, ರಾತ್ರಿ ಏಳು ಕಾಡಾನೆಗಳು ವಡವಳ್ಳಿ ಪ್ರದೇಶದ ಐಒಬಿ ಕಾಲೋನಿಗೆ ನುಗ್ಗಿರುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ ಮಧ್ಯರಾತ್ರಿಯ ಹೊತ್ತಿಗೆ ಕಾಡಾನೆಗಳು ನಗರಕ್ಕೆ ಬರುತ್ತಿದ್ದವು ಆದರೆ ಈಗ ಸಂಜೆಯ ವೇಳೆಗೆ ಬರಲು ಆರಂಭಿಸಿವೆ. ಇದರಿಂದ ಭಯಭೀತರಾದ ನಾಗರಿಕರು ಅರಣ್ಯ ಇಲಾಖೆಗೆ ಕರೆ ಮಾಡಿ ಪ್ರತಿನಿತ್ಯ ಗಸ್ತು ನಡೆಸಿ ಆನೆಗಳು ನಗರಕ್ಕೆ ನುಗ್ಗದಂತೆ ತಡೆಯಲು ಮುಂದಾಗಿದ್ದಾರೆ.
ವಿಡಿಯೋ ಮಾಡಿಟ್ಟು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ
ಆನೆಗಳು ಪಟ್ಟಣಕ್ಕೆ ನುಗ್ಗಿದರೆ ತಕ್ಷಣ ಮಾಹಿತಿ ನೀಡುವಂತೆ ಹಾಗೂ ಜೋರಾಗಿ ಶಬ್ದ ಮಾಡದಂತೆ, ಅಟ್ಟಿಸಿಕೊಂಡು ಹೋಗದಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ. ಸಾರ್ವಜನಿಕರು ಆದಷ್ಟು ಜಾಗರೂಕರಾಗಿರಿ ಮತ್ತು ಅಂತಹ ಶಬ್ದಗಳಿಂದ ದೂರವಿರಲು ಕೋರಲಾಗಿದೆ, ಏಕೆಂದರೆ ಕೆಲವೊಮ್ಮೆ ಕೂಗುವುದರಿಂದ ಆನೆಗಳು ಕೋಪಗೊಳ್ಳುತ್ತವೆ.