ಕಾನ್ಪುರ: ಪಾನ್ ಮಸಾಲಾ ಕಂಪನಿ ಮೇಲೆ ತೆರಿಗೆ ಹಾಗೂ ಜನರಲ್ ಆಫ್ ಜಿ ಎಸ್ ಟಿ ಇಂಟಲಿಜೆನ್ಸ್ (ಡಿಜಿಜಿಐ) ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಪುಷ್ಕರ್ ಪಾನ್ ಮಸಾಲಾ ಕಂಪನಿ ಮಾಲೀಕ, ಉದ್ಯಮಿ ಪಿಯೂಷ್ ಜೈನ್ ಮನೆ, ಕಚೇರಿ ಹಾಗೂ ಫ್ಯಾಕ್ಟರಿ ಸೇರಿದಂತೆ ಕನೌಜ್, ಮುಂಬೈ, ಗುಜರಾತ್ ನ ವಿವಿಧ ಸ್ಥಳಗಳಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಡಿಜಿಜಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಮನೆಯ ತುಂಬೆಲ್ಲ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದು, 150 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಜಿ ಎಸ್ ಟಿ ತೆರಿಗೆ ಹಣ ಪಾವತಿಸದೇ ಪಾನ್ ಮಸಾಲಾ ಮಾರಾಟ ಮಾಡುತ್ತಿದ್ದ ಬಗ್ಗೆ ಉದ್ಯಮಿ ವಿರುದ್ಧ ಆರೋಪ ಕೇಳಿಬಂದಿದ್ದು, ಜಿ ಎಸ್ ಟಿ ಕಾಯ್ದೆ ಸೆಕ್ಷನ್ 69ರ ಅನ್ವಯ ಉದ್ಯಮಿಯನ್ನು ವಶಕ್ಕೆ ಪಡೆಯಲಾಗಿದೆ.