ಒಮಿಕ್ರಾನ್ ಭೀತಿ ವಿಶ್ವದೆಲ್ಲೆಡೆ ಹೆಚ್ಚಾಗುತ್ತಿದೆ. ಒಮಿಕ್ರಾನ್ ಉಲ್ಬಣವಾದಂತೆ ಕೊರೋನಾ ಕೇಸ್ ಗಳು ದಿಡೀರ್ ಹೆಚ್ಚಾಗುತ್ತಿವೆ. ಯು.ಕೆ, ಸ್ಪೇನ್, ಇಟಲಿ ಸೇರಿದಂತೆ ಯುರೋಪ್ ದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲೆ ಸೋಂಕು ಹೆಚ್ಚಾಗಿರುವುದರಿಂದ, ಎರಡು ಆಚರಣೆಗಳಿಗು ಬ್ರೇಕ್ ಹಾಕಲಾಗಿದ್ದು ಕಠಿಣ ನಿಯಮಗಳನ್ನ ಜಾರಿಗೊಳಿಸಲಾಗಿದೆ. ಅದ್ರಲ್ಲು ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ರೂಲ್ ಮತ್ತೆ ಜಾರಿಯಾಗಿದೆ.
ಸ್ಪೇನ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ಮಾಸ್ಕ್ ಧರಿಸುವುದು ಕಡ್ಡಾಯವೇನಲ್ಲ ಎಂದು ಹೇಳಿದ್ದ ಸ್ಪ್ಯಾನಿಷ್ ಸರ್ಕಾರ ಕೊರೋನಾ ಕೇಸ್ ಗಳು ಹೆಚ್ಚಾಗ್ತಿದ್ದಂತೆ ಮಾಸ್ಕ್ ರೂಲ್ ವಾಪಸ್ ತಂದಿದೆ. ಜೊತೆಗೆ ಜನ ಗುಂಪು ಸೇರುವುದು, ಸಾರ್ವಜನಿಕ ಆಚರಣೆ ಸೇರಿದಂತೆ ಕೆಲ ಭಾಗಗಳಲ್ಲಿ ನೈಟ್ ಕರ್ಫ್ಯೂ ಹಾಗೂ ರೆಸ್ಟೊರೆಂಟ್, ಹೊಟೇಲ್ ಗಳಲ್ಲಿ ಐವತ್ತು ಪರ್ಸೆಂಟ್ ಪದ್ಧತಿಯನ್ನು ಜಾರಿಗೆ ತರಲಾಗಿದೆ.
BIG NEWS: JDS ಮುಖಂಡನ ಪುತ್ರ ಆತ್ಮಹತ್ಯೆಗೆ ಶರಣು
ಇಟಲಿಯಲ್ಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನ ಕಡ್ಡಾಯ ಮಾಡಿದ್ದು, ಒಂದೇ ದಿನದಲ್ಲಿ 44ಸಾವಿರಕ್ಕು ಹೆಚ್ಚು ಕೇಸ್ ಗಳು ವರದಿಯಾಗಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಜೊತೆಗೆ ಕಠಿಣ ಕೋವಿಡ್ ನಿಯಮಗಳನ್ನ ಜಾರಿಗೊಳಿಸಿದ್ದು, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ನಿಷೇಧಗೊಳಿಸಿದ್ದು, ಕ್ಲಬ್, ಪಬ್, ಡಿಸ್ಕೋ ಬಾರ್ ಗಳನ್ನ ಮುಚ್ಚಲಾಗಿದೆ. ಆಯ್ದ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.
ಗ್ರೀಸ್ ನಲ್ಲಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ನ್ಯೂ ಇಯರ್ ಹಾಗೂ ಕ್ರಿಸ್ಮಸ್ ಸೆಲೆಬ್ರೇಷನ್ ಗೆ ಕತ್ತರಿ ಬಿದ್ದಿದೆ. ಟ್ರಾವೆಲರ್ಸ್ ಪ್ಯಾರಡೈಸ್ ಎಂದೇ ಕರೆಸಿಕೊಳ್ಳುವ ಗ್ರೀಸ್, ಪ್ರವಾಸಿಗರಿಗೆ ಕಠಿಣ ರೂಲ್ಸ್ ಹೇರಿದ್ದು ನೆಗೆಟಿವ್ ರಿಪೋರ್ಟ್, ಸಾಮಾಜಿಕ ಅಂತರ ಹಾಗೂ ಆಯ್ದ ಪ್ರದೇಶಗಳಿಗೆ ಮಾತ್ರ ಅವಕಾಶ ನೀಡಿದೆ.