ಏಕೀಕೃತ ಪರವಾನಗಿ ಒಪ್ಪಂದವನ್ನ ತಿದ್ದುಪಡಿ ಮಾಡಿರುವ ದೂರಸಂಪರ್ಕ ಇಲಾಖೆ, ಟೆಲಿಕಾಂ, ಇಂಟರ್ನೆಟ್ ಸೇವಾ ಪೂರೈಕೆದಾರರು ಮತ್ತು ಎಲ್ಲಾ ಟೆಲಿಕಾಂ ಪರವಾನಗಿದಾರರು ಪ್ರಸ್ತುತ ಒಂದು ವರ್ಷದ ಅಭ್ಯಾಸದ ಬದಲಿಗೆ ಕನಿಷ್ಠ ಎರಡು ವರ್ಷಗಳವರೆಗೆ ವಾಣಿಜ್ಯ ಮತ್ತು ಕಾಲ್ ರೆಕಾರ್ಡಿಂಗ್ ಗಳನ್ನ
ಸಂರಕ್ಷಿಸಬೇಕು ಎಂದು ಸೂಚನೆ ನೀಡಿದೆ.
ಡಿಸೆಂಬರ್ 21 ರ ಅಧಿಸೂಚನೆಯ ಮೂಲಕ, ಎಲ್ಲಾ ಕರೆ ವಿವರಗಳ ದಾಖಲೆ, ವಿನಿಮಯದ ವಿವರಗಳ ದಾಖಲೆ ಮತ್ತು ನೆಟ್‌ವರ್ಕ್‌ನಲ್ಲಿ ‘ವಿನಿಮಯಗೊಳ್ಳುವ’ ಸಂವಹನಗಳ ಐಪಿ ವಿವರಗಳ ದಾಖಲೆಯನ್ನು ಎರಡು ವರ್ಷಗಳವರೆಗೆ ಅಥವಾ ಭದ್ರತಾ ‘ಪರಿಶೀಲನೆ’ಗಾಗಿ ಸರ್ಕಾರವು ನಿರ್ದಿಷ್ಟಪಡಿಸುವವರೆಗೆ ಉಳಿಸಿಡಬೇಕು ಎಂದು DoT ಹೇಳಿದೆ. ಇಂಟರ್ನೆಟ್ ಸೇವಾ ಪೂರೈಕೆದಾರರು ಎರಡು ವರ್ಷಗಳ ಅವಧಿಗೆ ಸಾಮಾನ್ಯ ಐಪಿ ವಿವರಗಳ ದಾಖಲೆಯ ಜೊತೆಗೆ ‘ಇಂಟರ್ನೆಟ್ ಟೆಲಿಫೋನ್’ ವಿವರಗಳನ್ನು ಸಹ ನಿರ್ವಹಿಸಬೇಕಾಗುತ್ತದೆ ಎಂದು ಅಧಿಸೂಚನೆ ತಿಳಿಸಿದೆ.
ಮುತ್ತಿಕ್ಕುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…! ಆಸಕ್ತಿಕಾರಿಯಾಗಿದೆ ಈ ವಿಷಯ
ಹೆಚ್ಚಿನ ತನಿಖೆಗಳು ಪೂರ್ಣಗೊಳ್ಳಲು ಒಂದು ವರ್ಷ ಅಥವಾ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ಒಂದು ವರ್ಷದ ನಂತರವೂ ಡೇಟಾ ಅಗತ್ಯವಿದೆ ಎಂದು ಅನೇಕ ಭದ್ರತಾ ಏಜೆನ್ಸಿಗಳು ಸೂಚಿಸಿದ್ದಾರೆ. ನಾವು ಎಲ್ಲಾ ಸೇವಾ ಪೂರೈಕೆದಾರರೊಂದಿಗೆ ಸಭೆ ನಡೆಸಿದ್ದೇವೆ, ಅವರು ಡೇಟಾವನ್ನು ವಿಸ್ತೃತ ಅವಧಿಗೆ ಇರಿಸಿಕೊಳ್ಳಲು ಒಪ್ಪಿಕೊಂಡರು ಎಂದು ಹಿರಿಯ DoT ಅಧಿಕಾರಿ ತಿಳಿಸಿದ್ದಾರೆ.
ಆಪರೇಟರ್‌ಗಳೊಂದಿಗೆ DoT ಹೊಂದಿರುವ ಪರವಾನಗಿ ಒಪ್ಪಂದದ ಷರತ್ತು ಸಂಖ್ಯೆ 39.20 ರ ಅಡಿಯಲ್ಲಿ, ನಂತರದವರು CDR ಗಳು ಮತ್ತು IP ವಿವರ ದಾಖಲೆಗಳು (IPDR) ಸೇರಿದಂತೆ ದಾಖಲೆಗಳನ್ನು ಕನಿಷ್ಠ ಒಂದು ವರ್ಷದವರೆಗೆ ಪರವಾನಗಿದಾರರಿಂದ (ಇದು DoT) ಪರಿಶೀಲನೆಗಾಗಿ ಸಂರಕ್ಷಿಸಬೇಕು, ಈ ಅವಧಿ ಈಗ ಎರಡು ವರ್ಷಕ್ಕೆ ವಿಸ್ತರಣೆಯಾಗಿದೆ.
ಈ ಬಗ್ಗೆ ಸ್ಪಷ್ಟಪಡಿಸಿರುವ ಇಲಾಖೆ, ಈ ನಿರ್ಧಾರದಿಂದ ಯಾವುದೇ ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಇಲ್ಲ. ಯಾವುದೇ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವುದಿಲ್ಲ. ಯಾವುದೇ ಫೋನ್ ಸಂಖ್ಯೆಯ ಟ್ರ್ಯಾಕಿಂಗ್ ನಡೆಯುತ್ತಿಲ್ಲ, ಅವಶ್ಯಕತೆ ಇದ್ದಾಗ ಈ ಡೇಟಾವನ್ನ ಬಳಸಲಾಗತ್ತೆ. ಇದು ದೇಶದ ಭದ್ರತೆಯ ವಿಚಾರ ಎಂದು ತಿಳಿಸಿದೆ.