alex Certify ಮಗನ ಸುಪರ್ದಿಯ ಹಕ್ಕು ಜಯಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನ ಸುಪರ್ದಿಯ ಹಕ್ಕು ಜಯಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆ

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಮತ್ತೊಂದು ಮಹಿಳೆಯೊಂದಿಗೆ ವಿವಾಹವಾದ ಬಳಿಕ ತಮ್ಮ ಮೊದಲ ಮದುವೆಯಿಂದ ಜನಿಸಿದ ಮಗು ತನಗೇ ಬೇಕೆಂದು ಅರ್ಜಿ ಹಾಕಿಕೊಂಡು ಬಂದಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ 50,000 ರೂ.ಗಳ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್, ಆತನ ಅರ್ಜಿಯನ್ನು ವಜಾಗೊಳಿಸಿದೆ.

ನ್ಯಾಯಾಧೀಶ ಕೃಷ್ಣ ಎಸ್‌ ದೀಕ್ಷಿತ್‌‌, ಅರ್ಜಿಯ ಆಲಿಕೆ ಮಾಡಿ, ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪೊಂದರ ಉಲ್ಲೇಖ ಮಾಡಿ, ಎರಡನೇ ಮಡದಿಯ ತಲಾಶೆಯಲ್ಲಿ ಮೊದಲನೇ ಮಡದಿಯನ್ನು ನಿರ್ಲಕ್ಷಿಸುವುದು ಅಮಾನವೀಯವಾಗಿದ್ದು, ಹೀಗಾದಲ್ಲಿ ಮೊದಲನೇ ಮಡದಿ ಗಂಡನ ಮನೆಯಿಂದ ಹೊರ ಬರಬಹುದು ಮಾತ್ರವಲ್ಲದೇ ಇದೇ ಆಧಾರದ ಮೇಲೆ ವಿಚ್ಛೇದನವನ್ನೂ ಪಡೆಯಬಹುದು ಎಂದು ಆ ತೀರ್ಪು ತಿಳಿಸಿದ್ದನ್ನು ಇಲ್ಲಿ ಗಮನಕ್ಕ ತಂದಿದ್ದಾರೆ.

BIG NEWS: ʼಒಮಿಕ್ರಾನ್‌ʼನಿಂದ ತತ್ತರಿಸಿರುವ ಪಾಶ್ಚಾತ್ಯ ಜಗತ್ತನ್ನು ಮತ್ತಷ್ಟು ಕಂಗೆಡಿಸಿದೆ ’ಡೆಲ್ಮಿಕ್ರಾನ್‌’

ಏಪ್ರಿಲ್ 2009ರಲ್ಲಿ ಮದುವೆಯಾಗಿದ್ದ ಜೋಡಿ ಅಮೆರಿಕದ ಅರಿಜ಼ೋನಾದಲ್ಲಿ ಕೆಲ ವರ್ಷ ವಾಸವಿತ್ತು. ಆಗಸ್ಟ್‌ 2013ರಲ್ಲಿ ಇವರಿಗೆ ಗಂಡು ಮಗು ಜನಿಸಿತ್ತು. ಇದೇ ವೇಳೆ, ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿಯಾದ ಪತಿ, ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ತನ್ನ ಮೊದಲ ಮದುವೆಯನ್ನು ವಿಸರ್ಜನೆಗೊಳಿಸಬೇಕೆಂದು ಕೋರಿ ಈತ 2016ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾನೆ.

ತನ್ನ ಎರಡನೇ ಮಡದಿ ಹಾಗೂ ಆಕೆಗೆ ಜನಿಸಿದ ಮಗುವಿನೊಂದಿಗೆ ಈ ಪುರುಷ ಆಗಿನಿಂದ ವಾಸವಿದ್ದಾನೆ. ತನ್ನ ಮೊದಲನೇ ಮದುವೆಯಿಂದ ಜನಿಸಿದ ಮಗ ತನಗೇ ಬೇಕೆಂದು ಈತ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಬೇಕಿದ್ದರೆ ಆತ ತನ್ನ ಮಗನನ್ನು ಆಗಾಗ ಭೇಟಿ ಮಾಡಿ ಮಾತನಾಡಿಸುತ್ತಿರಬಹುದು ಎಂದು ಕೋರ್ಟ್ ತಿಳಿಸಿದೆ.

ತಿಂಗಳ ಒಳಗಾಗಿ ತನ್ನ ಮೊದಲ ಪತ್ನಿಗೆ 50,000 ರೂ.ಗಳನ್ನು ಕಟ್ಟಿಕೊಡಬೇಕೆಂದು ಪತಿಗೆ ಆದೇಶಿಸಿರುವ ಕೋರ್ಟ್, ಇದಕ್ಕೆ ತಪ್ಪಿದಲ್ಲಿ ಮಗನನ್ನು ಆಗಾಗ ಭೇಟಿಯನ್ನೂ ಮಾಡುವಂತಿಲ್ಲ ಎಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...