alex Certify ಗೆಳೆಯನ ಜೊತೆಗಿನ ಸಂಬಂಧಕ್ಕೆ ನಟಿ ಸುಷ್ಮಿತಾ ಸೇನ್ ʼಗುಡ್‌ ಬೈʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನ ಜೊತೆಗಿನ ಸಂಬಂಧಕ್ಕೆ ನಟಿ ಸುಷ್ಮಿತಾ ಸೇನ್ ʼಗುಡ್‌ ಬೈʼ

ಬಾಲಿವುಡ್ ನಟಿ ಸುಶ್ಮಿತಾ ಸೇನ್ ತನ್ನ ಬಹುಕಾಲದ ಗೆಳೆಯ ರೋಹ್ಮನ್ ಶಾಲ್ ನಿಂದ ದೂರವಾಗಿದ್ದಾರೆ. ಈ ಬಗ್ಗೆ ನಟಿ ಸ್ವತಃ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ,

ಇತ್ತೀಚೆಗೆ ಸುಶ್ಮಿತಾ ಹಾಗೂ ರೋಹ್ಮನ್ ದೂರವಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು, ತಾವಿಬ್ಬರೂ ಬೇರ್ಪಟ್ಟಿರುವುದಾಗಿ ನಟಿ ತಿಳಿಸಿದ್ದಾರೆ. ತನ್ನ ಮಾಜಿ ಗೆಳೆಯ ರೋಹ್ಮನ್ ಜೊತೆಗಿನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸುಶ್ಮಿತಾ, ತಾವಿಬ್ಬರು ಬೇರೆಯಾಗಿರುವುದನ್ನು ಖಚಿತಪಡಿಸಿದ್ದಾರೆ.

ಗೆಳೆಯ ರೋಹ್ಮನ್ ಜೊತೆಗೆ ಬೇರ್ಪಟ್ಟರೂ ಸಹ ಇಬ್ಬರೂ ಸೌಹಾರ್ದಯುತ ಬಾಂಧವ್ಯವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತೋರುತ್ತದೆ. ಯಾಕೆಂದರೆ, ಸುಷ್ಮಿತಾ ತನ್ನ ಮಾಜಿ ಗೆಳೆಯನ ಫೋಟೋಗಳನ್ನು ಇನ್ನೂ ಕೂಡ ಡಿಲೀಟ್ ಮಾಡಿಲ್ಲ.

2018 ರಲ್ಲಿ ಸುಶ್ಮಿತಾ ಸೇನ್ ಮೊದಲು ರೋಹ್ಮನ್ ಶಾಲ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ನಂತರ ಸುಶ್ಮಿತಾ ಮತ್ತು ರೋಹ್ಮನ್ ಸಭೆ, ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿತ್ತು. ಇದೀಗ ತಮ್ಮಿಬ್ಬರ ಸಂಬಂಧಕ್ಕೆ ತಿಲಾಂಜಲಿ ಇಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...