ಬೆಂಗಳೂರು: ಅನ್ಯ ರಾಷ್ಟ್ರಗಳಿಂದ ಚಿನ್ನ, ಡ್ರಗ್ಸ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳ ಸಾಗಾಣೆ ಮಾಡಲು ಹಲವಾರು ಐನಾತಿ ಉಪಾಯಗಳನ್ನು ಮಾಡುತ್ತಿರುವುದು ಆಗಾಗ ಬೆಳಕಿಗೆ ಬರುತ್ತಿದ್ದವು. ಸದ್ಯ ಇಲ್ಲೊಬ್ಬ ಮಹಿಳೆಯ ಐಡಿಯಾ ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.
ಇಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾರ್ಜಾದಿಂದ ನಗರಕ್ಕೆ ಬಂದಿದ್ದ ಸೂಡಾನ್ ಮೂಲದ ಮಹಿಳೆಯೊಬ್ಬರು ಬರೋಬ್ಬರಿ 26.11 ಲಕ್ಷ ರೂಪಾಯಿ ಮೌಲ್ಯದ 535 ಗ್ರಾಂನಷ್ಟು ಚಿನ್ನವನ್ನು ಗುಪ್ತಾಂಗದಲ್ಲಿಟ್ಟುಕೊಂಡು ಸಾಗಾಟ ಮಾಡಲು ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದಾಳೆ.
ಈ ಮಹಿಳೆ ದುಬೈನಿಂದ ನಗರಕ್ಕೆ ಚಿನ್ನವನ್ನು ಕಳ್ಳಸಾಗಾಣೆ ಮಾಡಲು ಪ್ರಯತ್ನಿಸಿದ್ದಳು ಎನ್ನಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.