ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಸಾಕಷ್ಟು ಅವಕಾಶವಿದೆ. 2022 ನೇ ವರ್ಷವು ನೇಮಕಾತಿ ಪರೀಕ್ಷೆಗಳ ವರ್ಷವಾಗಲಿದೆ. ಹೊಸ ವರ್ಷ ಯುಪಿಎಸ್ಸಿ, ಎಸ್ ಎಸ್ ಸಿ, ಆರ್ ಆರ್ ಬಿ ಸೇರಿದಂತೆ ಅನೇಕ ದೊಡ್ಡ ನೇಮಕಾತಿ ನಡೆಯಲಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವು ನೇಮಕಾತಿ ಪರೀಕ್ಷೆಗಳು 2022ರಲ್ಲಿ ನಡೆಯಲಿವೆ.
ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪೆಲಿಮ್ಸ್ 2022 ಮತ್ತು ಭಾರತೀಯ ಅರಣ್ಯ ಸೇವೆ ಪ್ರಿಲಿಮ್ಸ್ 2022ಕ್ಕೆ ಫೆಬ್ರವರಿ 2ರಂದು ಅಧಿಸೂಚನೆ ಹೊರಡಿಸಲಾಗುವುದು. ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 22, 2022 ಆಗಿರುತ್ತದೆ. ಅದರ ನಂತರ ಪೂರ್ವಭಾವಿ ಪರೀಕ್ಷೆಗಳು ಜೂನ್ 5 ರಂದು ನಡೆಯಲಿದೆ. ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16, 2022 ರಂದು ನಡೆಸಲಾಗುವುದು. ಅದೇ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆಗಾಗಿ ಮುಖ್ಯ ಪರೀಕ್ಷೆಯನ್ನು ನವೆಂಬರ್ 20, 2022 ರಂದು ನಡೆಸಲಾಗುವುದು.
ಯುಪಿಎಸ್ಸಿ ಎನ್ ಡಿ ಎ 1 ಮತ್ತು ಯುಪಿಎಸ್ಸಿ ಸಿಡಿಎಸ್ 1 ನ ಮೊದಲ ಪರೀಕ್ಷೆಗಳಿಗೆ ಅರ್ಜಿ ಪ್ರಕ್ರಿಯೆ ಡಿಸೆಂಬರ್ 22, 2021 ರಿಂದ ಪ್ರಾರಂಭವಾಗಿದೆ. ಜನವರಿ 11, 2022 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಏಪ್ರಿಲ್ 10, 2022 ರಂದು ಪರೀಕ್ಷೆ ನಡೆಯಲಿದೆ. ಯುಎಪಿಎಸ್ಸಿ ಎನ್ ಡಿ ಎ 2 ಮತ್ತು ಯುಪಿಎಸ್ಸಿ ಸಿಡಿಎಸ್ 2 ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಮೇ 18 ರಿಂದ ಜೂನ್ 14 ರವರೆಗೆ ನಡೆಯಲಿದೆ. ಪರೀಕ್ಷೆ ಸೆಪ್ಟೆಂಬರ್ 4ರಂದು ನಡೆಯಲಿದೆ.
ಎರಡೂವರೆ ವರ್ಷಗಳ ನಂತರ ರೈಲ್ವೇ ನೇಮಕಾತಿ ಮಂಡಳಿ, ಗ್ರೂಪ್ ಡಿ ನೇಮಕಾತಿ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ಆರ್ ಆರ್ ಬಿ ಗ್ರೂಪ್ ಡಿ ಪರೀಕ್ಷೆ ಫೆಬ್ರವರಿ 23ರಿಂದ ನಡೆಯಲಿದೆ. ಹಲವಾರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. 10 ದಿನಗಳ ಮೊದಲು ಆರ್ ಆರ್ ಬಿಗಳ ಅಧಿಕೃತ ಮತ್ತು ಪ್ರಾದೇಶಿಕ ವೆಬ್‌ಸೈಟ್‌ಗಳಲ್ಲಿ ಪರೀಕ್ಷಾ ಕೇಂದ್ರ ಮತ್ತು ದಿನಾಂಕದ ಮಾಹಿತಿ ಲಭ್ಯವಾಗಲಿದೆ.
ಆರ್ ಆರ್ ಬಿ, ಎನ್ ಟಿ ಪಿ ಸಿ ಸಿಬಿಟಿ 2 ಪರೀಕ್ಷೆ ದಿನಾಂಕ ಪ್ರಕಟವಾಗಿದೆ. ಪ್ರಕಟಿಸಿದೆ. ಆರ್ ಆರ್ ಬಿ, ಎನ್ ಟಿ ಪಿ ಸಿ ಸಿಬಿಟಿ 2 ಪರೀಕ್ಷೆ ಫೆಬ್ರವವರಿ 14ರಿಂದ ಫೆಬ್ರವರಿ 18 ಫೆಬ್ರವರಿವರೆಗೆ ನಡೆಯಲಿದೆ. ಒಟ್ಟು 35,208 ಎನ್ ಟಿ ಪಿ ಸಿ ಹುದ್ದೆಗಳಿಗೆ ಭರ್ತಿ ನಡೆಯಲಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ ಮುಂದೆ ಬರುವ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಯೋಗವು ಸಿಜಿಎಲ್, ಸಿ ಎಚ್ ಎಸ್ ಎಲ್, ಎಂಟಿಎಸ್ ಸ್ಟೆನೋಗ್ರಾಫರ್, ಜಿಡಿ ಕಾನ್ಸ್ ಟೇಬಲ್ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳಿಗೆ ದಿನಾಂಕಗಳನ್ನು ಪ್ರಕಟಿಸಿದೆ.