ಜಪಾನ್ ಆವಿಷ್ಕಾರಗಳ ತಾಣ, ವಿಭಿನ್ನ ಮೇಕಪ್ ಪ್ರಾಡಕ್ಟ್ಸ್ ನಿಂದ ಹಿಡಿದು ರೊಬೋಟ್ ಗಳನ್ನ ತಯಾರಿಸಿರೊ ದೇಶ ಈಗ ನೆಕ್ಕಬಲ್ಲ ಟಿವಿಯನ್ನ ಕಂಡು ಹಿಡಿದಿದೆ. ಹೌದು ವಿಚಿತ್ರ ಆದರೂ ನಂಬಲೇಬೇಕಾದ ಸತ್ಯ ಇದು. ಜಪಾನ್ ನ ವಿಜ್ಞಾನಿ ಹೋಮೀ ಮಿಯಾಶಿತ TTTV ಅಂದರೆ ಟೇಸ್ಟ್ ದ ಟಿವಿಯನ್ನು ಡೆವಲಪ್ ಮಾಡಿದ್ದಾರೆ.
ಟಿವಿ ನೋಡುವಾಗ ಯಾವುದಾದರು ತಿನಿಸು ಕಣ್ಣಿಗೆ ಬಿದ್ದರೆ ಅದನ್ನು ತಿನ್ನುವ ಮನಸ್ಸಾಗುವುದು ಮಾನವನ ಸಹಜ ಗುಣ. ಅದರಲ್ಲಿ ಒಂದೆಜ್ಜೆ ಮುಂದೆ ಹೋಗಿರುವ ಜಪಾನ್ ವಿಜ್ಞಾನಿ, ಟಿವಿ ಪರದೆ ಮೇಲೆ ಯಾವುದಾದರು ಆಹಾರ ಕಂಡಾಗ ಸ್ಕ್ರೀನ್ ನೆಕ್ಕಿದರೆ ಆ ಆಹಾರದ ಫ್ಲೇವರ್ ನಮಗೆ ಸಿಗುವಂತ ಟಿವಿಯನ್ನೆ ಸೃಷ್ಟಿಸಿದ್ದಾರೆ.
ಪರದೆ ನೆಕ್ಕಿದ ನಂತರ ಮನುಷ್ಯರೇ ಅದನ್ನ ಸ್ವಚ್ಛ ಮಾಡಬೇಕಿಲ್ಲ ಅದಕ್ಕೂ ಸಲ್ಯೂಷನ್ ಕಂಡುಹಿಡಿದಿರೊ ಹೋಮೀ, ನೆಕ್ಕಿದ ನಂತರ ಫ್ಲೇವರ್ ಸ್ಯಾಂಪಲ್ ನ ಫಿಲ್ಮ್ ಹರಿದು ಸ್ಕ್ರೀನ್ ಸ್ವಚ್ಛಗೊಳಿಸುತ್ತದೆ. ಮಿಯಾಷಿತ ಅವರು ತಮ್ಮ 30 ವಿದ್ಯಾರ್ಥಿಗಳ ಟೀಂ ನೊಂದಿಗೆ ಕೆಲಸ ಮಾಡುತ್ತಾರೆ. ಈ ಮೊದಲು ಇವರ ಟೀಂ ನ ವಿದ್ಯಾರ್ಥಿಗಳು ಫ್ಲೇವರ್ ಭರಿತ ಪೋರ್ಕ್ ಒಂದನ್ನ ಕಂಡು ಹಿಡಿದಿದ್ದರು. ಕಳೆದೆರಡು ವರ್ಷದಿಂದ ಈ ಟಿವಿಯನ್ನ ಡೆವಲಪ್ ಮಾಡಲಾಗಿದ್ದು, ಸ್ಪ್ರೇ ಟೆಕ್ನಾಲಜಿ ಬಳಸಿ ರುಚಿ ಇರುವ ಸಾಕಷ್ಟು ಉಪಕರಣಗಳನ್ನ ಇವರು ಕಂಡುಹಿಡಿದಿದ್ದಾರೆ.
ಸಧ್ಯ ಟೇಸ್ಟ್ ದ ಟಿವಿಯನ್ನ ಮಾರ್ಕೆಟ್ ಗೆ ತರಲು ಪ್ರಯತ್ನಿಸುತ್ತಿರುವ ಹೋಮೀ, ಸಾಕಷ್ಟು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಚರ್ಚಿಸಿದ್ದಾರೆ. ಇನ್ನು ಈ ಟಿವಿಯ ಮಾರ್ಕೆಟ್ ಬೆಲೆ 100,000 ಯೆನ್ ಅಂದರೆ 65,782.28 ರೂಪಾಯಿ ಎಂದು ಅಂದಾಜಿಸಲಾಗಿದೆ.