alex Certify ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ವಿದೇಶಿ ಜೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ವಿದೇಶಿ ಜೋಡಿ..!

ಗುಜರಾತ್‌ನ ಸಬರ್‌ಕಾಂತದ ಹಿಮ್ಮತ್‌ನಗರ ಗ್ರಾಮದಲ್ಲಿ ಜರ್ಮನಿಯ ಉದ್ಯಮಿಯೊಬ್ಬರ ಮಗ ರಷ್ಯಾದ ಮಹಿಳೆಯನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಸುಂದರ ಮದುವೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಯೆಟ್ನಾಂನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ವಧು, ಜೂಲಿಯಾ ಉಖ್ವಾಟ್ಕಿನಾ ಮೂಲತಃ ರಷ್ಯಾದವರು. ಅವರು ವರ ಕ್ರಿಸ್ ಮುಲ್ಲರ್ ಅವರನ್ನ ವಿಯೆಟ್ನಾಂನಲ್ಲಿ ಭೇಟಿಯಾದರು, ಆ ನಂತರ ಇಬ್ಬರು ಪರಸ್ಪರ ಪ್ರೀತಿಸತೊಡಗಿದರು. ಇಬ್ಬರಿಗೂ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ಇತ್ತು.

ಜೂಲಿಯಾ ಇದಕ್ಕೂ ಮೊದಲು 8 ಬಾರಿ ಭಾರತಕ್ಕೆ ಬಂದು, ಭಾರತೀಯ ಸಂಸ್ಕೃತಿಯಿಂದ ಸಂಪೂರ್ಣವಾಗಿ ಸ್ಫೂರ್ತಿ ಪಡೆದಿದ್ದರು. ಕ್ರಿಸ್ ಕಳೆದ ವರ್ಷ ಕುಂಭಮೇಳಕ್ಕೆ ಹೋಗಿದ್ದರು. ಭಾರತೀಯ ಸಂಸ್ಕೃತಿಯೆಡೆಗೆ ಆಕರ್ಷಣೆ ಹೊಂದಿರುವ ಈ ಇಬ್ಬರೂ ಹಿಮ್ಮತ್‌ನಗರದ ಸಕ್ರೋಡಿಯಾ ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

ಜೂಲಿಯಾ ಇಂಗ್ಲಿಷ್ ಶಿಕ್ಷಕಿ ಮಾತ್ರವಲ್ಲ ಯೋಗ ಶಿಕ್ಷಕಿಯೂ ಹೌದು. ಕ್ರಿಸ್ ಶ್ರೀಮಂತ ಜರ್ಮನ್ ಉದ್ಯಮಿಯ ಮಗ. ಅವರು ಜರ್ಮನ್ ಮತ್ತು ಸಿಂಗಾಪುರ ಮೂಲದ ಕಂಪನಿಯ ಸಿಇಒ ಕೂಡ ಆಗಿದ್ದಾರೆ.

ಕ್ರಿಸ್ ಕೂಡ ಭಗವಾನ್ ಅವರ ಬೋಧನೆಗಳಿಂದ ಸ್ಫೂರ್ತಿ ಪಡೆದಿದ್ದಾರೆ. ಕ್ರಿಸ್ ಮತ್ತು ಜೂಲಿಯಾ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಲು ಬಯಸಿದ್ದರು. ಅವರ ಆಸೆಯನ್ನು ಅವರ ಗೆಳೆಯರಾದ ನೀಲೇಶ್ ಚೌಹಾಣ್ ಮತ್ತು ಭಗೀರಥ ಪಟೇಲ್ ನೆರವೇರಿಸಿದರು.

ಭಗೀರಥನ ತಂದೆ ಲಾಲಾಭಾಯಿ ಮದುವೆಯನ್ನು ಏರ್ಪಡಿಸಿದರು. ವಿದೇಶಿ ವಧು-ವರರ ವಿವಾಹವನ್ನು ವೀಕ್ಷಿಸಲು ಜನರು ಸಬರಕಾಂತ ಗ್ರಾಮದಲ್ಲಿ ನೆರೆದಿದ್ದಲ್ಲದೆ, ಅವರನ್ನು ಆಶೀರ್ವದಿಸಲು ಸ್ಥಳೀಯ ಮುಖಂಡರು ಸಹ ಉಪಸ್ಥಿತರಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...