ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ ಆರಂಭಿಕ ಹಂತದಲ್ಲಿದ್ದರೂ ಸಹ, ಒಂದಷ್ಟು ಎಲೆಕ್ಟ್ರಿಕ್ ಸ್ಕೂಟರ್ಗಳು ಭಾರೀ ಸುದ್ದಿ ಮಾಡುತ್ತಿವೆ.
ಅಂಥ ಒಂದಷ್ಟು ಮಾಡೆಲ್ಗಳ ವಿವರಗಳು ಇಂತಿವೆ:
ಓಲಾ ಎಸ್1 ಮತ್ತು ಎಸ್1 ಪ್ರೋ
ಓಲಾ ಎಲೆಕ್ಟ್ರಿಕ್ ತನ್ನ ಇವಿ ಸ್ಕೂಟರ್ಗಳಾದ ಓಲಾ ಎಸ್1 ಮತ್ತು ಓಲಾ ಎಸ್1 ಪ್ರೋಗಳನ್ನು ಡೆಲಿವರಿ ನೀಡಲು ಆರಂಭಿಸಿದ್ದು, ಬೆಂಗಳೂರು ಮತ್ತು ಚೆನ್ನೈನ ಗ್ರಾಹಕರಿಗೆ ಮೊದಲ ಡೆಲಿವರಿಗಳನ್ನು ಮಾಡಿದೆ.
ಚಿಪ್ಗಳ ಕೊರತೆಯಿಂದಾಗಿ ತನ್ನ ಇವಿ ಸ್ಕೂಟರ್ಗಳ ಉತ್ಪಾದನೆ ತಡವಾದ ಕಾರಣ ಡೆಲಿವರಿಗಳು ಸ್ವಲ್ಪ ತಡವಾಗುವುದಾಗಿ ಓಲಾ ವಿಷಾದ ವ್ಯಕ್ತಪಡಿಸಿತ್ತು.
ಸರಳ ವಿನ್ಯಾಸದ ಈ ಸ್ಕೂಟರ್ಗಳಿಗೆ ಎರಡೂ ಬದಿಯಲ್ಲಿ ಎಲ್ಇಡಿ ದೀಪಗಳಿದ್ದು, 12-ಇಂಚಿನ ಬಹುಲೋಹದ ಚಕ್ರಗಳು ಮತ್ತು ಮೋನೋಶಾಕ್ಗಳನ್ನು ನೀಡಲಾಗಿದೆ.
ಡಚ್ ಕಂಪನಿಯಾದ ಎಟೆರ್ರಾ ಆಪ್ ಸ್ಕೂಟರ್ ಅನ್ನು ಓಲಾ ಕೆಲ ದಿನಗಳ ಹಿಂದೆ ಖರೀದಿಸಿದ್ದು, ತನ್ನ ಇವಿ ಸ್ಕೂಟರ್ಗಳಿಗೆ ಅದೇ ಲುಕ್ ಕೊಟ್ಟಿದೆ.
ಈ ಸ್ಕೂಟರ್ಗಳು ಕೀ ಇಲ್ಲದೇ ಕಾರ್ಯಾಚರಿಸಬಲ್ಲವಾಗಿವೆ. ನಿಮ್ಮ ಫೋನ್ನಲ್ಲಿ ಡೌನ್ಲೋಡ್ ಮಾಡಬಲ್ಲ ಅಪ್ಲಿಕೇಶನ್ ಒಂದರ ಮೂಲಕ ಸ್ಕೂಟರ್ ಚಾಲೂ ಮಾಡಬಹುದಾಗಿದೆ. ನೀವು ಸ್ಕೂಟರ್ ಬಳಿ ಹೋಗುತ್ತಲೇ ನಿಮ್ಮನ್ನು ಸೆನ್ಸ್ ಮಾಡುವ ಸ್ಕೂಟರ್ ತನ್ನಿಂತಾನೇ ಅನ್ಲಾಕ್ ಆಗಲಿದೆ.
ಭಾರತದ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ದಿನದಂದು ತನ್ನ ಸ್ಕೂಟರ್ಗಳನ್ನು ಓಲಾ ಬಿಡುಗಡೆ ಮಾಡಿತ್ತು. ಓಲಾ ಎಸ್1ನ ಬೆಲೆ ಒಂದು ಲಕ್ಷ ರೂಪಾಯಿಗೆ ಒಂದು ರೂಪಾಯಿ ಕಮ್ಮಿ ಇದ್ದರೆ, ಓಲಾ ಎಸ್1 ಪ್ರೋ ಬೆಲೆಯು 1,30,000 ರೂ.ಗೆ ಒಂದು ರೂಪಾಯಿ ಕಡಿಮೆ ಇದೆ.
ಸಿಂಪಲ್ ಒನ್
ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾದ ದಿನವೇ ಲಾಂಚ್ ಆದ ಸಿಂಪಲ್ ಒನ್, ದೇಶದಲ್ಲಿ ಸದ್ಯ ಇರುವ ಇನ್ನಾವುದೇ ಇ-ಸ್ಕೂಟರ್ಗಿಂತಲೂ ಹೆಚ್ಚಿನ ಮೈಲೇಜ್ ನೀಡುವುದಾಗಿ ತಿಳಿಸಿದೆ.
ಒಂದು ಪೂರ್ಣ ಚಾರ್ಜ್ ಮೇಲೆ ಸ್ಕೂಟರ್ನಲ್ಲಿರುವ 4.8 ಕಿವ್ಯಾ ಲಿಥಿಯಂ-ಐಯಾನ್ ಬ್ಯಾಟರಿ 236ಕಿಮೀ ದೂರ ಓಡಬಲ್ಲದಾಗಿದೆ.
ಏಳು ಇಂಚಿನ ಟಚ್ಸ್ಕ್ರೀನ್, ಇನ್-ಬಿಲ್ಟ್ ನೇವಿಗೇಷನ್, ಚಕ್ರದಲ್ಲಿರುವ ಗಾಳಿಯ ಒತ್ತಡ ಸೂಚಕ, ಸ್ಮಾರ್ಟ್ ಫೋನ್ ಸಂಪರ್ಕಗಳಂಥ ಆಕರ್ಷಕ ಫೀಚರ್ಗಳನ್ನು ಹೊಂದಿರುವ ಈ ಸ್ಕೂಟರ್ನ ಬೆಲೆ 1.1 ಲಕ್ಷ ರೂ.ಗಳಷ್ಟಿದೆ.
ಬೌನ್ಸ್ ಇನ್ಫಿನಿಟಿ
ಇದೇ ತಿಂಗಳು ಭಾರತದಲ್ಲಿ ಲಾಂಚ್ ಆಗಿರುವ ಬೌನ್ಸ್ ಇನ್ಫಿನಿಟಿ, 2ಕಿವ್ಯಾ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಪೂರ್ಣ ಚಾರ್ಜ್ ಮೇಲೆ ಇಕೋ ಮೋಡ್ನಲ್ಲಿ 85ಕಿಮೀ ಮತ್ತು ಟಾಪ್ ಸ್ಪೀಡ್ನಲ್ಲಿ 65ಕಿಮೀ ಚಲಿಸಬಲ್ಲದಾಗಿದೆ.
ಎಲ್ಪಿಜಿ ಸಿಲಿಂಡರ್ಗಳ ಮರುಪೂರಣದ ರೀತಿಯಲ್ಲಿ ಈ ಸ್ಕೂಟರ್ನ ಬ್ಯಾಟರಿಗಳನ್ನು ಖಾಲಿಯಾದಾಗ ಬೌನ್ಸ್ನ ಬ್ಯಾಟರಿ ಸ್ವಾಪಿಂಗ್ ಜಾಲದೊಂದಿಗೆ ಪೂರ್ಣವಾದ ಬ್ಯಾಟರಿಯೊಂದಿಗೆ ಬದಲಿಸಿಕೊಳ್ಳಬಹುದಾಗಿದೆ.
ಬೌನ್ಸ್ ಇನ್ಫಿನಿಟಿಯ ಬೆಲೆ 79,999 (ಎಕ್ಸ್ ಶೋರೂಂ) ಇದ್ದು, ಬ್ಯಾಟರಿ ಸ್ವಾಪಿಂಗ್ ಆಯ್ಕೆಯ ಮೂಲಕ 36,000 ರೂ.ಗಳಷ್ಟು ಕಡಿಮೆ ಮಾಡಬಹುದಾಗಿದೆ.
ಇವೆವೆ ಸೋಲ್
ಕಳೆದ ವಾರ ಭಾರತದಲ್ಲಿ ಲಾಂಚ್ ಆಗಿರುವ ಇವೆವೆ ಸೋಲ್, ಲಿಥಿಯೀಂ ಫೆರ್ರಸ್ ಫಾಸ್ಫೇಟ್ನ ಎರಡು ಬ್ಯಾಟರಿಗಳೊಂದಿಗೆ ಬರುತ್ತದೆ. ಈ ಬ್ಯಾಟರಿಗಳು ಪೂರ್ಣ ಚಾರ್ಜ್ ಒಂದರ ಮೇಲೆ 120 ಕಿಮೀ ಮೈಲೇಜ್ ನೀಡುತ್ತದೆ. ತನ್ನ ತತ್ಸಮಾನ ಇ-ಸ್ಕೂಟರ್ಗಳಲ್ಲಿರುವ ಸಾಮಾನ್ಯ ಫೀಚರ್ಗಳನ್ನು ಹೊಂದಿರುವ ಇವೆವೆ ಸೋಲ್ನ ಎಕ್ಸ್ಶೋರೂಂ ಬೆಲೆ 1.4 ಲಕ್ಷ ರೂ.ಗಳಷ್ಟಿದೆ.
ಇಬೈಕ್ಗೋ ರಗ್ಡ್
ಎಲೆಕ್ಟ್ರಿಕ್ ಮೋಟೋ ಸ್ಕೂಟರ್ ಆಗಿರುವ ಇಬೈಕ್ಗೋ ರಗ್ಡ್, 1.9ಕಿವ್ಯಾಎಚ್ ಬದಲಿಸಬಲ್ಲ ಬ್ಯಾಟರಿಗಳೊಂದಿಗೆ ಬರುತ್ತಿದ್ದು, 75ಕಿಮೀ/ಗಂಟೆಯಷ್ಟು ಟಾಪ್ ಸ್ಪೀಡ್ ಹೊಂದಿದೆ. ಈ ಸ್ಕೂಟರ್ನ ಬ್ಯಾಟರಿಯನ್ನು ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದಲ್ಲಿ 160 ಕಿಮೀನಷ್ಟು ಸಂಚರಿಸಬಹುದಾಗಿದೆ.
ಕ್ರಾಡಲ್ ಚಾಸಿ ಮತ್ತು ಸ್ಟೀಲ್ ಫ್ರೇಂಗಳಿಂದಾಗಿ ರಗ್ಡ್ನ ವಿನ್ಯಾಸ ಸದೃಢವಾಗಿದೆ. 12 ಸೆನ್ಸಾರ್ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಐಓಟಿ ಫೀಚರ್ಗಳನ್ನು ಹೊಂದಿರುವ ಈ ಸ್ಕೂಟರ್ ಅನ್ನು ಸ್ಮಾರ್ಟ್ಫೋನ್ ಅಪ್ಲಿಕೇಶನ್ ಮೂಲಕ ಅಕ್ಸೆಸ್ ಮಾಡಬಹುದಾಗಿದೆ.