![](https://kannadadunia.com/wp-content/uploads/2021/12/106959963-1634151315566-gettyimages-1218004444-womanquarantinehomeisolationfacemaskcovid-19coronavirusmdome.jpeg)
ಕೊರೋನಾ ಇಂದು ನಾಳೆ ಮುಗಿಯೋವಂತದ್ದಲ್ಲ. ಈ ಸೋಂಕು ವಿಶ್ವಕ್ಕೆ ಕಾಲಿಟ್ಟಾಗಿಂದ ಮನುಷ್ಯ ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಎರಡು ವರ್ಷದ ಹಿಂದೆ ಎಂಟ್ರಿ ಕೊಟ್ಟ ಕೋವಿಡ್ ಇಡೀ ಮಾನವ ಸಂಕುಲಕ್ಕೆ ಮಾಸ್ಕ್ ಗಳನ್ನ ಪರಿಚಯಿಸಿದೆ. ಆದ್ರೆ ದಿನ ಕಳೆದಂತೆ ಹೊಸ ಹೊಸ ರೂಪ ತಾಳಿ ಮತ್ತಷ್ಟು ಡೇಂಜರಸ್ ಆಗ್ತಿರೋ ಕೋವಿಡ್ ನಮ್ಮ ದೇಹ ಸೇರದಂತೆ ಬಟ್ಟೆ ಮಾಸ್ಕ್ ರಕ್ಷಣೆ ನೀಡುತ್ತಾ ಅನ್ನೋ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸಿದ್ದಾರೆ.
ಗುಲಾಬಿ ನೀಡಿ ಕೈ ಮುಗಿದು ʼಬಂದ್ʼ ಗೆ ಬೆಂಬಲ ಕೇಳಿದ ಕನ್ನಡ ಪರ ಹೋರಾಟಗಾರರು..!
ಬಟ್ಟೆ ಮಾಸ್ಕ್, ಸರ್ಜಿಕಲ್ ಮಾಸ್ಕ್ ಎರಡರಲ್ಲಿ ಯಾವುದು ಬೆಸ್ಟ್..?
ವಿಜ್ಞಾನಿಗಳ ಪ್ರಕಾರ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ಗೆ ಹೋಲಿಸಿದಾಗ, ಸರ್ಜಿಕಲ್ ಮಾಸ್ಕ್ ಉತ್ತಮ ರಕ್ಷಣೆ ನೀಡುತ್ತದೆ. ವೈರಸ್ ವಿರುದ್ಧ 95% ರಕ್ಷಣೆ ನೀಡುವ ಸರ್ಜಿಕಲ್ ಮಾಸ್ಕ್, ಕೇವಲ 37% ಎಫಕ್ಟಿವ್ ಆಗಿರುವ ಬಟ್ಟೆ ಮಾಸ್ಕ್ ಗಿಂತ ಉತ್ತಮ. ಇತ್ತ KN95 ಮಾಸ್ಕ್ ಅತ್ಯಂತ ಸುರಕ್ಷಿತ ಎನ್ನುವುದು ತಜ್ಞರ ಅಭಿಪ್ರಾಯ. ಆದ್ರೆ ಇಷ್ಟು ದಿನ ಬಟ್ಟೆ ಮಾಸ್ಕ್ ಧರಿಸಿ ಅಭ್ಯಾಸವಾಗಿರುವ ಜನರಿಗೆ ಸರ್ಜಿಕಲ್ ಮಾಸ್ಕ್ ಅಥವಾ KN95 ಮಾಸ್ಕ್ ಗೆ ಶಿಫ್ಟ್ ಆಗೋದು ಸುಲಭವಲ್ಲ.
ಸರ್ಜಿಕಲ್ ಮಾಸ್ಕ್ ಧರಿಸುವವರಿಗಿಂತ, ಬಟ್ಟೆ ಮಾಸ್ಕ್ ಧರಿಸುವವರಿಗೆ ಸೋಂಕು ತಗುಲುವ ಅಪಾಯ ಹೆಚ್ಚಿದೆ. ಡೆಲ್ಟಾ, ಒಮಿಕ್ರಾನ್ ನಂತಹ ಅಪಾಯಕಾರಿ ರೂಪಾಂತರಿ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವು ಬಳಸುವ ಮಾಸ್ಕ್ ಬಗ್ಗೆ ಗಮನ ವಹಿಸಲೆಬೇಕು ಎಂಬುದು ತಜ್ಞರ ಅಭಿಪ್ರಾಯ. ಎಲ್ಲಾ ಸಂದರ್ಭದಲ್ಲೂ ಬಟ್ಟೆ ಮಾಸ್ಕ್ ಧರಿಸುವುದು ಒಳ್ಳೆಯದಲ್ಲ, ಹೆಚ್ಚು ಜನ ನೆರೆದಿರುವ ಪ್ರದೇಶಗಳಿಗೆ ಭೇಟಿ ಕೊಟ್ಟಾಗ, ಬಸ್, ವಿಮಾನ, ರೈಲಿನಲ್ಲಿ ಪ್ರಯಾಣಿಸುವಾಗ, ಸಿನಿಮಾ ಥಿಯೇಟರ್ ನಲ್ಲಿ, ಶಾಲಾ-ಕಾಲೇಜುಗಳಲ್ಲಿ ಸರ್ಜಿಕಲ್ ಮಾಸ್ಕ್ ಧರಿಸುವುದು ಉತ್ತಮ.