ವಾಷಿಂಗ್ಟನ್ : ಜಗತ್ತಿನಲ್ಲಿ ಸದ್ಯ ಓಮಿಕ್ರಾನ್ ನ ಆತಂಕ ಹೆಚ್ಚಾಗುತ್ತಿದೆ. ಆದರೆ, ಇದರ ಮಧ್ಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.
ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್ ನ ತಜ್ಞರ ಅಧ್ಯಯನ ವರದಿಗಳು ಬಹಿರಂಗವಾಗಿವೆ. ಈ ಅಧ್ಯಯನದ ವರದಿಯಂತೆ ಓಮಿಕ್ರಾನ್ ನ ತೀವ್ರತೆ ಡೆಲ್ಟಾಗಿಂತಲೂ ಕಡಿಮೆ ಇರಲಿದೆ.
ಹೆಚ್ಚಿನ ಜನರಿಗೆ ಸೋಂಕು ತಗುಲಿದರೂ ಶೇ.30 ರಿಂದ 47ರಷ್ಟು ಜನ ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಬಹುದು. ಅಲ್ಲದೇ, ವಯಸ್ಸಾದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಮಾತ್ರ ಇದರ ತೀವ್ರತೆ ಕಾಡಬಹುದು ಎಂದು ವರದಿಯಿಂದ ತಿಳಿದು ಬಂದಿದೆ.
2022 ರಲ್ಲಿ ʼಶ್ರೀಮಂತʼರಾಗ್ಬೇಕೆಂದ್ರೆ ಇದನ್ನ ಮನೆಗೆ ತನ್ನಿ
ಓಮಿಕ್ರಾನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಡೆಲ್ಟಾ ಸೋಂಕಿನಿಂದ ಆಸ್ಪತ್ರೆ ಸೇರುವವರ ಸಂಖ್ಯೆಗಿಂತ ಮೂರನೇ ಎರಡರಷ್ಟು ಕಡಿಮೆಯಾಗಲಿದ್ದು, ಬೂಸ್ಟರ್ ಡೋಸ್ ಲಸಿಕೆಯು ಸೋಂಕಿನ ವಿರುದ್ಧ ಹೋರಾಡಲಿದೆ ಎಂದು ಅಧ್ಯಯನ ಹೇಳಿದೆ.