alex Certify BIG NEWS: ಸಿದ್ದರಾಮಯ್ಯ ಕಾಲದಲ್ಲೇ ಮತಾಂತರ ನಿಷೇಧ ಬಿಲ್ ಸಿದ್ಧತೆ; ದಾಖಲೆ ವಿವರಿಸಿದ ಬಿಜೆಪಿ; ಸಿಡಿದೆದ್ದ ಕಾಂಗ್ರೆಸ್; ಸದನದಲ್ಲಿ ಕೋಲಾಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯ ಕಾಲದಲ್ಲೇ ಮತಾಂತರ ನಿಷೇಧ ಬಿಲ್ ಸಿದ್ಧತೆ; ದಾಖಲೆ ವಿವರಿಸಿದ ಬಿಜೆಪಿ; ಸಿಡಿದೆದ್ದ ಕಾಂಗ್ರೆಸ್; ಸದನದಲ್ಲಿ ಕೋಲಾಹಲ

ಬೆಳಗಾವಿ: ಮತಾಂತರ ನಿಷೇಧ ಮಸೂದೆ ವಿಚಾರ ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದ್ದು, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲದಲ್ಲೇ ಬಿಲ್ ಗೆ ಸಿದ್ಧತೆ ನಡೆಸಲಾಗಿತ್ತು ಎಂಬ ಬಿಜೆಪಿ ನಾಯಕರ ಹೇಳಿಕೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ.

ಮತಾಂತರ ನಿಷೇಧ ಕಾಯ್ದೆ ಬಿಲ್ ನ್ನು 2016ರಲ್ಲಿಯೇ ಸಿದ್ಧಪಡಿಸಲಾಗಿತ್ತು. ಆದರೆ ಆಕಸ್ಮಿಕವಾಗಿ ಕ್ಯಾಬಿನೆಟ್ ಮುಂದೆ ಬರಲಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾಗ ಬಿಲ್ ಗೆ ಸೂಚಿಸಿ ಕಾನೂನು ಆಯೋಗಕ್ಕೆ ಹೇಳಿದ್ದರು. ಅದೇ ಬಿಲ್ ನ್ನು ಇಂದು ನಾವು ಮಂದಿಸುತ್ತಿದ್ದೇವೆ. ಈಗ ಕಾಂಗ್ರೆಸ್ ನಾಯಕರು ವಿರೋಧಿಸುತ್ತಿರುವುದೇಕೆ? ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.

2022 ರಲ್ಲಿ ʼಶ್ರೀಮಂತʼರಾಗ್ಬೇಕೆಂದ್ರೆ ಇದನ್ನ ಮನೆಗೆ ತನ್ನಿ

ಮಾಧುಸ್ವಾಮಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕಾನೂನು ಆಯೋಗ ಶಿಫಾರಸು ಮಾಡಿತ್ತು. ಆದರೆ ಅಂದಿನ ಕಾನೂನು ಸಚಿವ ಜಯಚಂದ್ರ ಅವರ ಜೊತೆ ಚರ್ಚೆ ಮಾಡಿದ್ದೆ ಹೊರತು ನಾನು ಯಾವುದೇ ಪ್ರಸ್ತಾವನೆ ಕೊಟ್ಟಿಲ್ಲ ಎಂದರು. ಇದಕ್ಕೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕದ ಬಗ್ಗೆ ದಾಖಲೆಯ ಅಂಶಗಳನ್ನು ಓದಿ ಹೇಳಿದರು. ಕಡತಕ್ಕೆ ಕಾಂಗ್ರೆಸ್ ಸಹಿ ಹಾಕಿದ ಬಗ್ಗೆಯೂ ತಿಳಿಸಿದರು. ಸದನದಲ್ಲಿ ಸಿಕ್ಕಿ ಹಾಕಿಕೊಂಡ ಕಾಂಗ್ರೆಸ್ ಸದಸ್ಯರು ಎಂದು ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸಂಭ್ರಮಿಸುತ್ತಿದ್ದಂತೆ ಸಿಡಿದೆದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ದಾಖಲೆಗೆ ಸಹಿ ಹಾಕಲು ಸಾಧ್ಯವಿಲ್ಲ. 5 ವರ್ಷಗಳ ಹಿಂದೆ ನಡೆದ ಚರ್ಚೆ ಹಾಗಾಗಿ ನನಗೆ ಮರೆತಿರಬಹುದು. ದಾಖಲೆಗಳನ್ನು ತರಿಸಿ ಮತ್ತೊಮ್ಮೆ ಪರಿಶೀಲಿಸುತ್ತೇನೆ. ಅದಕ್ಕೆ ಮೇಜು ಕುಟ್ಟಿ ಸಂಭ್ರಮಿಸುವ ಅಗತ್ಯವಿಲ್ಲ. ಜನವಿರೋಧಿ ಕಾಯ್ದೆ ಜಾರಿಗೆ ತರಲು ಬಿಡಲ್ಲ ಎಂದರು.

ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ಆರಂಭವಾಗುತ್ತಿದ್ದಂತೆ ಸದನದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಬಿಲ್ ಸಿದ್ಧವಾಗಿದೆ. ನೀವೇ ಮಾಡಿದ ಬಿಲ್ ನ್ನು ನಾವೀಗ ಮಂಡಿಸುತ್ತಿದ್ದೇವೆ. ಹಾಗಿರುವಾಗ ನೀವು ವಿರೋಧಿಸುತ್ತಿರುವುದು ಸರಿಯಲ್ಲ. ಅನಗತ್ಯ ಚರ್ಚೆ ಮಾಡಿ ಅಪಹಾಸ್ಯಕ್ಕೀಡಾಗುವ ಬದಲು ಕಾಯ್ದೆ ಜಾರಿಗೆ ಸರ್ವಾನುಮತದಿಂದ ಅವಕಾಶ ನೀಡಿ ಎಂದರು.

ಕಾಯ್ದೆಯಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ ಎಂಬದನ್ನು ತಿಳಿಸಲಾಗಿದೆ. ಬಲವಂತದ ಮತಾಂತರ ನಡೆದರೆ ಶಿಕ್ಷೆ ಬಗ್ಗೆಯೂ ಎಚ್ಚರಿಸಲಾಗುತ್ತಿದೆ. ಮಾಜಿ ಸಿಎಂ ಆಗಿರುವ ಸಿದ್ದರಾಮಯ್ಯ ಕಾನೂನಿನ ಬಗ್ಗೆ ತಿಳಿದವರು. ಹಾಗಾಗಿ ಸದನದಲ್ಲಿ ನಿಮ್ಮ ಸಲಹೆ ಅಗತ್ಯವಿದೆ. ನೀವು ಮಾಡಿದ ಬಿಲ್ ಗೆ ನೀವೇ ವಿರೋಧಿಸಿದರೆ ಆ ದೇವರೆ ಕಾಪಾಡಬೇಕು ಎಂದರು. ದಾಖಲೆ ಬಗ್ಗೆ ಅನುಮಾನವಿದ್ದರೆ ಖುದ್ದಾಗಿ ಮತ್ತೊಮ್ಮೆ ದಾಖಲೆ ತರಿಸಿಕೊಂಡು ನೋಡಿ ಎಂದು ಸಲಹೆ ನೀಡಿದರು.

ಸಂವಿಧಾನ ವಿರೋಧಿ ಬಿಲ್ ನ್ನು ಯಾವುದೇ ಕಾರಣಕ್ಕೂ ಪಾಸ್ ಮಾಡಲು ಬಿಡಲ್ಲ. ಕಡತಕ್ಕೆ ಕಾಂಗ್ರೆಸ್ ಸಹಿ ಹಾಕಿರುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳುತಿದ್ದಂತೆ ವಿಧಾನಸಭಾ ಕಲಾಪವನ್ನು ಕೆಲ ಕಾಲ ಮುಂದೂಡಿ ಸ್ಪೀಕರ್ ಆದೇಶ ನೀಡಿದರು. ಒಟ್ಟಾರೆ ಮತಾಂತರ ನಿಷೇಧ ಕಾಯ್ದೆ ವಿಧೇಯಕ ವಿಚಾರವಾಗಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದ್ದು, ಬಿಲ್ ಪಾಸ್ ಮಾಡಲು ಬಿಜೆಪಿ ಮುಂದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...