ಮನುಷ್ಯ ದಿನದಿಂದ ದಿನಕ್ಕೆ ತನ್ನ ಸಾಮಾನ್ಯ ಮಿತಿಗಳನ್ನ ಮೀರುತ್ತಿದ್ದಾನೆ. ಗುರುತ್ವಾಕರ್ಷಣ ಶಕ್ತಿಯಿಲ್ಲದ ಬಾಹ್ಯಾಕಾಶಕ್ಕೋದ ಮಾನವ, ಈಗ ಅದೇ ಸ್ಪೇಸ್ ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗಗನಯಾತ್ರಿ ಮಥಿಯಾಸ್ ಮೌರೆರ್ ಅವರು ಟ್ವಿಟರ್ನಲ್ಲಿ ಹೊಸ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು ಬಾಹ್ಯಾಕಾಶ ನೌಕೆಯೊಳಗೆ ಸಹೋದ್ಯೋಗಿಯಿಂದ ಕ್ಷೌರ ಮಾಡುವುದನ್ನು ಕಾಣಬಹುದು. ಬಾಹ್ಯಾಕಾಶದಲ್ಲಿ ಮಾನವ ಚಲನೆಗಳು ಸೀಮಿತವಾಗುತ್ತವೆ, ಆದ್ರೆ ಮಾನವ ಇಲ್ಲೂ ತನ್ನ ಸಾಮರ್ಥ್ಯ ಮೀರಿ ಕೆಲಸ ಮಾಡುವ ತುಡಿತದಲ್ಲಿರುತ್ತಾನೆ. ಅದ್ರಲ್ಲಿ ಗಗನಯಾತ್ರಿಗಳು ಸಹ ಸೇರುತ್ತಾರೆ ಅನ್ನೋದಕ್ಕೆ ಇದೆ ಸಾಕ್ಷಿ.
ಸಾಂಟಾಕ್ಲಾಸ್ ಸಾಕ್ಸ್ ನಲ್ಲಿ ಗಿಫ್ಟ್ ನೀಡೋದು ಏಕೆ ಗೊತ್ತಾ…? ಇದರ ಹಿಂದಿದೆ ಈ ಕಾರಣ
ವಿಡಿಯೋ ಹಂಚಿಕೊಂಡ ಮೌರೆರ್, ಕ್ಷೌರ ಮಾಡಿರುವ ಆಸ್ಟ್ರೋರಾಜ ಅವರನ್ನ ಹಾಡಿ ಹೊಗಳಿದ್ದಾರೆ. ರಾಜಾ ಅನೇಕ ಪ್ರತಿಭೆಗಳಿರುವ ವ್ಯಕ್ತಿ, ಒಂದು ಎಳೆ ಕೂದಲು ಸ್ಪೇಸ್ ನಲ್ಲಿ ಹಾರದಂತೆ ಹೇರ್ ಕಟ್ ಮಾಡಿದ್ದಾರೆ. ಏಕೆಂದರೆ ನಮ್ಮಲ್ಲಿ ಯಾರಿಗೂ ನಮ್ಮ ಕಣ್ಣಾಲ್ಲಾಗಲಿ ಅಥವಾ ಸ್ಪೇಸ್ ಸ್ಟೇಷನ್ ಸಿಸ್ಟಮ್ಗಳಲ್ಲಿ ಕೂದಲು ಬೇಕಿಲ್ಲ. ಈ ಬಾಹ್ಯಾಕಾಶ ಸ್ಟೈಲಿಸ್ಟ್ ಸೇವೆಗಾಗಿ ಐದು ನಕ್ಷತ್ರಗಳು ಎಂದು ಬರೆದಿದ್ದಾರೆ.
ಬಾಹ್ಯಾಕಾಶದಲ್ಲಿನ ಪ್ರತಿಯೊಂದು ಕ್ರಿಯೆಯು ಒಂದು ನಿರ್ದಿಷ್ಟ ಮೌಲ್ಯವನ್ನು ಹೊಂದಿದೆ ಮತ್ತು ಸರಿಯಾಗಿ ಮಾಡದಿದ್ದರೆ ಅದು ಭವಿಷ್ಯದ ಪ್ರಯಾಣಿಕರನ್ನು ಕಾಡಲು ಹಿಂತಿರುಗಬಹುದು, ಅಥವಾ ಇನ್ನೂ ಕೆಟ್ಟ ಪರಿಸ್ಥಿತಿ ಇಡೀ ಬಾಹ್ಯಾಕಾಶ ಮಿಷನ್ ಗೆ ಕುತ್ತಾಗಬಹುದು. ಆದರೆ ಗಗನಯಾತ್ರಿಗಳು ತಮ್ಮ ಜ್ಞಾನ ಮತ್ತು ಇಚ್ಛೆಯಿಂದ ಗಡಿಯನ್ನು ತಳ್ಳುತ್ತಲೇ ಇರುತ್ತಾರೆ ಅನ್ನೋದಕ್ಕೆ ಇದೆ ಸಾಕ್ಷಿ.