
ಒಮಿಕ್ರಾನ್ ಇಡೀ ವಿಶ್ವವನ್ನ ಕಾಡುತ್ತಿರುವ ಹೊಸ ರೂಪದ ವೈರಸ್. ರಾಜಧಾನಿಯಿಂದಲೆ ಇಡೀ ದೇಶಕ್ಕೆ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್, ನಗರದಲ್ಲಿ ಕ್ಷೀಣಿಸುತ್ತಿದೆ. ಸಧ್ಯ ಸಿಲಿಕಾನ್ ಸಿಟಿಯಲ್ಲಿ ಕೇವಲ ಎರಡು ಓಮಿಕ್ರಾನ್ ಕೇಸ್ ಗಳು ಮಾತ್ರ ಆಕ್ಟಿವ್ ಆಗಿವೆ.
ಯುಕೆಯಿಂದ ವಾಪಸ್ಸಾದ 19 ವರ್ಷದ ಯುವತಿ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದ 33 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಸದ್ಯ ಇಬ್ಬರು ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಿಸೆಂಬರ್ 13 ರಂದು 19 ವರ್ಷದ ಸೋಂಕಿತ ಯುವತಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ, ಆನಂತರ ಡಿಸೆಂಬರ್ 14 ರಂದು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. 7 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯ ಸ್ಥಿರವಾಗಿದ್ದು, ಇನ್ನು ಮೂರು ದಿನಗಳಲ್ಲಿ ಯುವತಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗುವ ಸಾಧ್ಯತೆಯಿದೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; ಕ್ರಿಸ್ ಮಸ್ – ಹೊಸ ವರ್ಷಾಚರಣೆ ನಡುವೆಯೆ ಹೆಚ್ಚಿದ ಆತಂಕ
ಇತ್ತ 33 ವರ್ಷದ ದಕ್ಷಿಣ ಆಫ್ರಿಕಾದಿಂದ ಬಂದ ಸೋಂಕಿತ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈಗಾಗ್ಲೇ 10 ದಿನಗಳ ಆಸ್ಪತ್ರೆ ವಾಸ ಮುಗಿಸಿರುವ ಈತನ ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದಿದೆ. ಇಂದು ಮತ್ತೊಮ್ಮೆ ಸೋಂಕಿತ ವ್ಯಕ್ತಿಗೆ ಕೋವಿಡ್ ಟೆಸ್ಟ್ ನಡೆಯಲಿದ್ದು, ಇಂದಿನ ರಿಪೋರ್ಟ್ ನೆಗೆಟಿವ್ ಬಂದರೆ, ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಲಿದ್ದಾರೆ. ಈಗಾಗ್ಲೇ ವ್ಯಕ್ತಿಯ ಸಂಪರ್ಕಕ್ಕೆ ಬಂದ 25 ಸಂಪರ್ಕಿತರ ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ವರದಿಯಾಗಿದೆ. ಈ ಮೊದಲು ವರದಿಯಾಗಿದ್ದ ಉಳಿದ ಒಮಿಕ್ರಾನ್ ಸೋಂಕಿತರು, ವೈರಸ್ ನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.