ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ಹೆಚ್ಚಾಗುತ್ತಿದ್ದರೂ ಲಸಿಕೆ ಹಾಕಿಸಿಕೊಳ್ಳುವ ವಿಷಯದಲ್ಲಿ ದೇಶದ ಹಲವೆಡೆ ಇನ್ನೂ ಅಸಡ್ಡೆ ಭಾವನೆ ಕಂಡು ಬರುತ್ತಿದೆ.
ಸರ್ಕಾರಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಸಂಘ – ಸಂಸ್ಥೆಗಳ ಪ್ರತಿನಿಧಿಗಳು ಎಷ್ಟೇ ಜಾಗೃತಿ ಮೂಡಿಸಿದರೂ ಲಸಿಕೆಯಿಂದ ಹಲವರು ದೂರವೇ ಉಳಿಯುತ್ತಿದ್ದಾರೆ. ಸಾಕಷ್ಟು ರೀತಿಯ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುವ ಕಾರ್ಯ ಕೂಡ ನಡೆಯುತ್ತಿವೆ. ಆದರೆ, ಈ ರಾಜ್ಯದಲ್ಲಿ ಲಸಿಕೆ ಪಡೆಯದವರಿಗೆ ಸಂಬಳವೇ ಇಲ್ಲ ಎಂದು ಹೇಳಲಾಗಿದೆ.
ಪಂಜಾಬ್ ರಾಜ್ಯದಲ್ಲಿ ಈ ನಿಯಮ ಜಾರಿಗೊಳಿಸಲಾಗಿದ್ದು, ಇಲ್ಲಿನ ಸರ್ಕಾರಿ ನೌಕರಸ್ಥರು ತಮ್ಮ ಲಸಿಕಾ ಪ್ರಮಾಣ ಪತ್ರ ನೀಡಿದರೆ ಮಾತ್ರ ಅವರಿಗೆ ಸಂಬಳ ಸಿಗುತ್ತದೆ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಸಂಬಳವೇ ಸಿಗುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.
ಅಲ್ಲಿ ಸರ್ಕಾರಿ ಉದ್ಯೋಗಿಗಳು ತಮ್ಮ ಕೋವಿಡ್ ಲಸಿಕೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸರ್ಕಾರದ ವೆಬ್ ತಾಣದಲ್ಲಿ ಅಪ್ಲೋಡ್ ಮಾಡಬೇಕು. ಆಗ ಮಾತ್ರ ಅವರಿಗೆ ಸಂಬಳ ಸಿಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಟೆಸ್ಟ್ ಶ್ರೇಯಾಂಕದಲ್ಲಿ ಹಿಂದೆ ಸರಿದ ಕಿಂಗ್….ಹಿಟ್ ಮ್ಯಾನ್ ಸ್ಥಿರ….ಎರಡನೇ ಸ್ಥಾನಕ್ಕೆ ಅಶ್ವಿನ್!
ಆದರೆ, ಲಸಿಕೆ ಪಡೆಯದ ಉದ್ಯೋಗಿಗಳ ಸಂಬಳವನ್ನು ತಡೆ ಹಿಡಿದು, ಲಸಿಕೆ ಹಾಕಿಸಿಕೊಂಡ ಮೇಲೆ ನೀಡುತ್ತದೆಯೋ ಅಥವಾ ಸಂಬಳವನ್ನೇ ನೀಡುವುದಿಲ್ಲವೋ ಎಂಬ ಕುರಿತು ಮಾತ್ರ ಪಂಜಾಬ್ ಸರ್ಕಾರ ಹೇಳಿಲ್ಲ.
ಆದರೆ, ಓಮಿಕ್ರಾನ್ ಆತಂಕದ ಈ ಸಮಯದಲ್ಲಿ ಜನರ ಸೇವೆ ಮಾಡುವ ಸರ್ಕಾರಿ ನೌಕರಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂಬುವುದು ಮಾತ್ರ ಸರ್ಕಾರದ ಉದ್ಧೇಶವಾಗಿದೆ.