1994 ರ ತ್ರಿವಳಿ ಕೊಲೆ ಪ್ರಕರಣದ ಆರೋಪಿ ಸುಮೇಧ್ ಸಿಂಗ್ ಸೈನಿ ಅವರು ಹಾಸಿಗೆಯ ಮೇಲೆ ಮಲಗಿ, ವಿಚಾರಣೆಗೆ ಹಾಜರಾದ ನಂತರ ನ್ಯಾಯಾಲಯವು ಸೋಮವಾರ “ತಮ್ಮ ವರ್ತನೆಯ ಬಗ್ಗೆ ಜಾಗರೂಕರಾಗಿರಿ” ಎಂದು ಎಚ್ಚರಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶರಾದ ಸಂಜೀವ್ ಅಗರ್ವಾಲ್ ಅವರು ಸುಮೇಧ್ ಸೈನಿ ಅವರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗುವಾಗ ಭವಿಷ್ಯದಲ್ಲಿ ಅವರ ವರ್ತನೆಯ ಬಗ್ಗೆ ಜಾಗರೂಕತೆ ವಹಿಸಿ ಮತ್ತು “ನ್ಯಾಯಾಲಯದ ನಿಯಮಗಳನ್ನ ಕಾಪಾಡಿಕೊಳ್ಳಲು” ಸೂಚಿಸಿದ್ದಾರೆ.
ಕೊರೊನಾದಿಂದ ಸಾವನ್ನಪ್ಪಿದ್ದ ಗ್ರಾಪಂ ಸದಸ್ಯ: ಆತನ ಸಹೋದರನನ್ನೇ ಅವಿರೋಧ ಆಯ್ಕೆ ಮಾಡಿದ ಗ್ರಾಮಸ್ಥರು
ಮಾಜಿ ಪೋಲೀಸ್ ಆಗಿರುವ ಸುಮೇಧ್ ಸೈನಿ ತಾನು ಅಸ್ವಸ್ಥನಾಗಿದ್ದೇನೆ ಮತ್ತು ಜ್ವರದಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದರು. ಆದರೂ ಅನಾರೋಗ್ಯದ ಪ್ರಮಾಣ ಪತ್ರ ನ್ಯಾಯಾಲಯಕ್ಕೆ ಒದಗಿಸದ್ದನ್ನು ಗಮನಿಸಿದ ನ್ಯಾಯಾಧೀಶರು ಭವಿಷ್ಯದಲ್ಲಿ ತಮ್ಮ ನಡವಳಿಕೆ ಬಗ್ಗೆ ಜಾಗರೂಕರಾಗಿ, ನ್ಯಾಯಾಲಯದ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂದು ಎಚ್ಚರಿಸಿದ್ದಾರೆ. 1994 ರಲ್ಲಿ ವಿನೋದ್ ಕುಮಾರ್, ಅಶೋಕ್ ಕುಮಾರ್ ಮತ್ತು ಅವರ ಚಾಲಕ ಮುಖ್ತಿಯಾರ್ ಸಿಂಗ್ ಎಂಬ ಮೂವರನ್ನು ಅಪಹರಿಸಿ ಹತ್ಯೆಗೈದ ಆರೋಪ ಎದುರಿಸುತ್ತಿರುವ ಸುಮೇಧ್ ಸೈನಿ, ಪಂಜಾಬ್ ನಲ್ಲಿ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದಾರೆ.