ಕ್ರಿಕೆಟನ್ನ ಜೆಂಟಲ್ ಮನ್ಸ್ ಗೇಮ್ ಅಂತಾರೆ. ಬಹುಶಃ ಶತಮಾನಗಳ ಹಿಂದೆ, ಕ್ರಿಕೆಟ್ ಜೆಂಟಲ್ ಮನ್ ಗೇಮ್ ಆಗಿತ್ತೇನೊ. ಈಗಿನ ಸ್ಥಿತಿ ಬೇರೆ ಇದೆ. ಇಂತದ್ದೊಂದು ಅಭಿಪ್ರಾಯ ಸಾಮಾಜಿಕ ಜಾಲತಾಣದಿಂದ ಕೇಳಿಬಂದಿದೆ. ಬಿಸಿಸಿಐನ ಹಾಲಿ ಅಧ್ಯಕ್ಷ ಕ್ರಿಕೆಟ್ ನ ದಾದಾ ಎಂದೇ ಪ್ರಸಿದ್ಧರಾಗಿರೋ ಸೌರವ್ ಗಂಗೂಲಿ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಶನಿವಾರ ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ದಾದಾ, ಆಡಿಯನ್ಸ್ ನೊಂದಿಗೆ ಮಾತನಾಡುತ್ತ ಲೈಫ್ ನಲ್ಲಿ ಸ್ಟ್ರೆಸ್ ಇಲ್ಲ, ಆದರೆ ಗೆಳತಿ ಮತ್ತು ಹೆಂಡತಿ ಸ್ಟ್ರೆಸ್ ನೀಡ್ತಾರೆ ಎಂದಿದ್ದಾರೆ. ಆ ಕ್ಷಣಕ್ಕೆ ಲೈಟ್ ಹಾರ್ಟೆಡ್ ಆಗಿ ಜೋಕ್ ಮಾಡಿದ್ದ ಸೌರವ್ ಗೆ ಬಹುಶಃ ತನ್ನ ಹೇಳಿಕೆ ಇಂತಾ ವಿವಾದಕ್ಕೆ ಕಾರಣವಾಗತ್ತೆ ಎಂದು ಗೊತ್ತಿರಲಿಲ್ಲ.
ಹೆಣ್ಣು ಮಕ್ಕಳ ನೋವು ತಿಳಿಯದವರು ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿದ್ದಾರೆ – ಈಶ್ವರಪ್ಪ ಹೇಳಿಕೆ
ಸಧ್ಯ ದಾದಾ ನೀಡಿರೊ ಈ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದ್ದು ಟ್ವಿಟ್ಟರ್ ಯೂಸರ್ಸ್ ಸೌರವ್ ಗಂಗೂಲಿಯನ್ನ ತರಾಟೆಗೆ ತೆಗೆದ್ಕೊಂಡಿದ್ದಾರೆ. 21 ನೇ ಶತಮಾನದಲ್ಲೂ ಮಹಿಳೆಯರ ಬಗ್ಗೆ ಈ ತರದ ಹೇಳಿಕೆಗಳು ಎಷ್ಟು ಸರಿ ಎಂದು ಮಹಿಳೆಯರು ಮಾತ್ರವಲ್ಲ ಪುರುಷರು ಕೇಳಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೇ ಹಾಲಿ ಬಿಸಿಸಿಐನ ಅಧ್ಯಕ್ಷರಾಗಿರುವ ನಿಮಗೆ ಸಮಾಜದಲ್ಲಿ ಜವಾಬ್ದಾರಿಯಿದೆ ಅದನ್ನ ಅರ್ಥಮಾಡಿಕೊಂಡು ಯೋಚಿಸಿ ಹೇಳಿಕೆ ನೀಡಿ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
https://twitter.com/rohshah07/status/1473145851211960322?ref_src=twsrc%5Etfw%7Ctwcamp%5Etweetembed%7Ctwterm%5E1473145851211960322%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fsourav-gangulys-quote-on-wife-and-girlfriend-slammed-on-twitter-as-sexist-4579943.html