ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಭೂಮಿ ಖರೀಸುವುದು ಪ್ರತಿಯೊಬ್ಬರ ಕನಸು. ಪುಣ್ಯಭೂಮಿಯಲ್ಲಿ ನಮ್ಮದೊಂದು ಪಾಲಿರಲಿ ಅನ್ನೋ ಮಂದಿ, ರಾಮಮಂದಿರದ ತೀರ್ಪು ಬಂದ್ಮೇಲೆ ಅಯೋಧ್ಯೆಯತ್ತ ಗಮನ ಹರಿಸಿದ್ದಾರೆ.
ರಾಮಮಂದಿರದ ಸುತ್ತಮುತ್ತ 70ಕಿ.ಮೀ. ಆವರಣ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪಾಲಾಗಿದೆ. ಇನ್ನುಳಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ, ಸಾರ್ವಜನಿಕರು ಭೂಮಿ ಖರೀದಿಸಬಹುದು ಎಂಬ ನಿರ್ಧಾರ ಮಾಡಲಾಗಿದೆ. ಆದ್ರೆ ಇಲ್ಲಿ ನಿಜವಾಗಲು ಸಾಮಾನ್ಯ ಜನರಿಗೆ ಭೂಮಿ ಖರೀದಿಸಲು ಸಾಧ್ಯವಿದೆಯ ಎಂಬ ಪ್ರಶ್ನೆ ಕಾಡೋಕೆ ಶುರುವಾಗಿದೆ.
ಈ ಬಗ್ಗೆ ʼಇಂಡಿಯನ್ ಎಕ್ಸ್ ಪ್ರೆಸ್ʼ ತನಿಖಾ ವರದಿ ಹೊರಬಿದ್ದಿದ್ದು, ಅಯೋಧ್ಯೆ ಭೂಮಿ ಅಲ್ಲಿನ ಸ್ಥಳೀಯ ಎಂಎಲ್ಎ, ಮೇಯರ್, ಅಧಿಕಾರಿಗಳು, ಕಮಿಷನರ್ ಸಂಬಂಧಿಕರಿಗೆ ಸುಲಭವಾಗಿ ಸಿಗುವ ತುತ್ತಾಗಿದೆ ಎಂದು ಮೇಲ್ನೊಟಕ್ಕೆ ಕಾಣಿಸುತ್ತಿದೆ. ಎಂಎಲ್ಎ, ಮೇಯರ್, ಡಿವಿಷನಲ್ ಕಮಿಷನರ್, ಪೊಲೀಸ್ ಇನ್ಸ್ ಪೆಕ್ಟರ್, ಒಬಿಸಿ ಬೋರ್ಡ್ ಮುಖ್ಯಸ್ಥ, ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಸೇರಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳ ಹೆಸರು ಭೂಮಿ ಖರೀದಿಯಲ್ಲಿ ಮುಂಚೂಣಿಯಲ್ಲಿದೆ.
ಬೆರಗಾಗಿಸುತ್ತೆ ವಿದೇಶದ ವ್ಯಾಸಂಗ ಕೈಬಿಟ್ಟು ಭಾರತಕ್ಕೆ ಮರಳಿದ ಯುವಕರ ಸಾಧನೆ
ತಮ್ಮ ಹೆಸರಲ್ಲಿ ಮಾತ್ರವಲ್ಲ ತಮ್ಮ ಸಂಬಂಧಿಕರ ಹೆಸರಲ್ಲೂ ಭೂಮಿ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಇವರನ್ನಾಗಲಿ ಅಥವಾ ಇವರ ಸಂಬಂಧಿಕರನ್ನಾಗಲಿ ಈ ಬಗ್ಗೆ ಕೇಳಿದರೆ ನಾವು ಯಾವುದೇ ಭೂಮಿ ಖರೀದಿ ಮಾಡಿಲ್ಲ, ಅಷ್ಟಕ್ಕೂ ನಾನು ಬೇರೆ ರಾಜ್ಯದವರನ್ನ, ನಮ್ಮ ರಾಜ್ಯದ ಅನ್ಯ ಭಾಗದವರನ್ನ ಇಲ್ಲಿ ಭೂಮಿ ಖರೀದಿಸಿ ಎಂದು ಆಹ್ವಾನಿಸಿದ್ದೇನೆ ಎಂದು ಅಯೋಧ್ಯೆಯ ಎಂಎಲ್ಎ ಹೇಳಿಕೆ ನೀಡಿದ್ದಾರೆ.